ಪರಿಶಿಷ್ಟರ ಅಭಿವೃದ್ಧಿಗೆ ಯುವಕರು ಮುಂದಾಗಲಿ: ರಾಜು ಕಾಗೆ

0
22
loading...

ಕಾಗವಾಡ 14: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡಿದೆ. ಅದರ ಸದುಪಯೋಗ ಪಡೆದುಕೊಂಡು ಸಮಾಜ ಅಭಿವೃದ್ಧಿಗೊಳಿಸಲು ಯುವಕರು ಮುಂದಾಗಬೇಕೆಂದು ಕಾಗವಾಡ ಶಾಸಕ ರಾಜು ಕಾಗೆ ಕರೆ ನೀಡಿದರು.ಲಕಾಗವಾಡದ ಬಸವ ನಗರಲಕ್ಷ ವೆಚ್ಚದಲ್ಲಿ ಅಂಬೇಡ್ಕರ ಸಮುದಾಯ ಭವನ ಕಟ್ಟಿಸುವ ಕಾಮಗಾರಿ ಪೂಜೆ ಸಲ್ಲಿಸಿ ಶಾಸಕ ರಾಜು ಕಾಗೆ ಮಾತನಾಡುತ್ತಿದ್ದರು. ಈಗಾಗಲೇ ಅನೇಕ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಿದ್ದೇವೆ. ಅದರ ಸದುಪಯೋಗ ಆಗುತ್ತಿಲ್ಲ. ಇಂತಹ ಭವನಗಳಲ್ಲಿ ಮಹಿಳೆಯರು ಬೇರೆ ಬೇರೆ ಸ್ವಯಂ ಉದ್ಯಮಗಳು ಪ್ರಾರಂಭಿಸಿ ತಮ್ಮ ಪ್ರಾಪಂಚಿಕ ಸಮಸ್ಯೆಗಳು ಬಗೆಹರಿಸಿಕೊಳ್ಳಬೇಕೆಂದು ಹೇಳಿದರು. ಇದೇ ನಗರದಲ್ಲಿ ಈಗಾಗಲೇ 40ಲಕ್ಷ ರೂಗಳ ದಲಿತರ ಓಣಿಗಳಲ್ಲಿ ರಸ್ತೆ ನಿರ್ಮಿಸಿದ್ದೇವೆ ಎಂದು ಹೇಳಿದರು.ಲಸರ್ಕಾರ ನಿಮಗಾಗಿ ಅನುದಾನದ ಸದ್ಬಳಕೆ ಆಗುತ್ತಿದೆಯೊ ಇಲ್ಲೋ ಇದನ್ನು ಗುರುತಿಸುವುದು ಸಮುದಾಯದ ಕರ್ತವ್ಯ. ಕಾಮಗಾರಿ ಕಳಪೆ ಮಟ್ಟದ ಆಗದಂತೆ ನೊಡಿಕೊಳ್ಳುವುದು ನಿಮ್ಮದೇ ಆದ ಜವಾಬ್ದಾರಿ ಎಂದು ಶಾಸಕ ರಾಜು ಕಾಗೆ ಹೇಳಿದರು.ಸಮಾರಂಭದ ಅಧ್ಯಕ್ಷತೆ ಜಿ.ಪಂ.ಸದಸ್ಯ ಅಜೀತ ಚೌಗುಲೆ ವಹಿಸಿದ್ದರು. ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಜ್ಯೋತಗೌಡಾ ಪಾಟೀಲ, ಗ್ರಾ.ಪಂ.ಅಧ್ಯಕ್ಷೆ ಶ್ರೀದೇವಿ ಚೌಗುಲೆ, ತಾ.ಪಂ.ಸದಸ್ಯ ಶ್ರೀಮತಿ ದೇವಣೆ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಎಂ.ಎಸ್‌.ಯಾದವಾಡ , ಕೆ.ಆರ.ಡಿ.ಎಸ್‌ ಅಧಿಕಾರಿ ಷನ್ಮುಖಪ್ಪ, ರಮೇಶ ಚೌಗುಲೆ ಭೀಮಶಕ್ತಿ ಅಭಿವೃದ್ಧಿ ಸಂಘ, ಭೀಮಸೇನಾ ಸ್ವಸಹಾಯ ಸಂಘದ ಮುಖಂಡರು, ಪ್ರಕಾಶ ಧೊಂಡಾರೆ, ಅಮೀತ ದಿಕ್ಷಾಂತ, ವಿದ್ಯಾಧರ ಧೊಂಡಾರೆ, ಶಿಲಾದಾರ ಚವ್ಹಾಣ, ಭುಜಂಗ ಕಾಂಬಳೆ, ದೀಪಕ ಕಾಂಬಳೆ, ವಿನೋದ ದೇವಣೆ, ಮಿರಾಸಾಬ ಕಾಂಬಳೆ ಸೇರಿದಂತೆ ಅನೇಕರು ಇದ್ದರು.

loading...