ಪರಿಶಿಷ್ಟ ರೈತರ ಏತ ನೀರಾವರಿಗೆ 1.07 ಕೋಟಿ: ಶಾಸಕ ಐಹೊಳೆ 

0
19
loading...

ಕನ್ನಡಮ್ಮ ಸುದ್ದಿರಾಯಬಾಗ 15: ನೀರಾವರಿ ಇಲಾಖೆಯ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಮಂಜೂರಾದ ತಾಲೂಕಿನ ನಂದಿಕುರಳಿ ಗ್ರಾಮದ ಬಾಬುರಾವ ಶಂಕರ ವಂಜೇರಿ ಹಾಗೂ ಇತರರ ತೋಟಗಳ ನೀರಾವರಿಗಾಗಿ ಕೃಷ್ಣ ನದಿಯಿಂದ ಏತನೀರಾವರಿ ಯೋಜನೆಯ 1 ಕೋಟಿ 7 ಲಕ್ಷ ರೂ. ಕಾಮಗಾರಿಗೆ ಶುಕ್ರವಾರ ನಂದಿಕುರಳಿ ಗ್ರಾಮದ ಪೂಜ್ಯ ಶ್ರೀ ಜಯವೀರಭದ್ರ ಮಹಾಸ್ವಾಮಿಗಳು ಹಾಗೂ ರಾಯಬಾಗ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು.ಬಳಿಕ ಮಾತನಾಡಿ ಕೃಷ್ಣ ನದಿಯಿಂದ ಪೈಪಲೈನ್‌ ಮಾಡುವುದರಿಂದ ಈ ಭಾಗದ ರೈತರ ಸುಮಾರು 50 ಎಕರೆ ಜಮೀನವು ನೀರಾವರಿಯಾಗುತ್ತದೆ ಫಲಾನುಭವಿಗಳು ಸರಿಯಾಗಿ ಇದರ ಸದ್ಬಳಕೆಮಾಡಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಪೃಥ್ವಿರಾಜ ಜಾಧವ, ಸದಾಶಿವ ಘೋರ್ಪಡೆ, ಅಮೀತ ಜಾಧವ, ಬಲ್ಲು ಜಾಧವ, ಗಣಪತಿ ಮಾಳಿ, ನಿಂಗಪ್ಪ ಬಾನಕರೆ, ರಾಮಾ ಸಂಗೋಟೆ, ಆರ್‌.ಬಿ.ಶಾಹರೆ, ನೀರಾವರಿ ಇಲಾಖೆಯ ಹಾಲಪ್ಪ ಪೂಜಾರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...