ಪಾಲಿಕೆ ಅಧಿಕಾರಿಗಳ ಸರ್ವಾಧಿಕಾರ: ನಗರ ಸೇವಕರ ಆಕ್ರೋಶ

0
34
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:13 ಮಹಾನಗರ ಪಾಲಿಕೆಯ ಆಡಳಿತಾತ್ಮಕ ಸಭೆಯಲ್ಲಿ ನಗರ ಸೇವಕರನ್ನು ಕಡೆಗಣಿಸಿ ಆಡಳಿತಾತ್ಮಕ ಸಭೆ ನಡೆಸುತ್ತಿರುವುದಕ್ಕೆ ಪಾಲಿಕೆಯ ನಗರ ಸೇವಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬುಧವಾರ ಮಹಾನಗರ ಪಾಲಿಕೆ ಮೇಯರ್ ಕಚೇರಿಯಲ್ಲಿ ನಗರ ಸೇಕರನ್ನು ಹೊರಗಡೆ ಇಟ್ಟು ಆಡಳಿತಾತ್ಮಕ ಸಭೆ ನಡೆಸುತ್ತಿದ್ದಾರೆ. ನಗರ ಸೇವಕರಿಗೆ ತಮ್ಮ ವಾರ್ಡ ಸಮಸ್ಯೆ ಹೇಳಿಕೊಳ್ಳಲು ಕೌನ್ಸಿಲ್ ಸಭೆಯಲ್ಲೂ ಬೆಳಕು ಚೆಲ್ಲಲು ಬಿಡುವುದಿಲ್ಲ. ಇಂಥ ಸಭೆಯಲ್ಲಿಯೂ ನಗರ ಸೇವಕರನ್ನು ಹೊರಗಿಟ್ಟು ಸಭೆ ನಡೆಸುತ್ತಿರುವುದಕ್ಕೆ ಕೆಲ‌ ನಗರ ಸೇವಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಪಾಲಿಕೆಯ ಅಧಿಕಾರಿಗಳು ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ವಾರ್ಡ ಸಮಸ್ಯೆ ತೆಗೆದುಕೊಂಡು ಅಧಿಕಾರಿಗಳ ಕಡೆ ಹೋದರೆ ತಿಂಗಳಾನುಗಂಟಲೆ ತೆಗೆದಯಕೊಳ್ಳುತ್ತಾರೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ನಗರ ಸೇವಕರು ಹರಿಹಾಯದ್ದರು.
ನಗರ ಸೇವಕರಾದ ದಿನೇಶ ನಾಶಿಪುಡಿ, ಅನುಶ್ರೀ ದೇಶಪಾಂಡೆ, ಪುಷ್ಪಾ ಪರ್ವತರಾವ್, ಜಯಶ್ರೀ ಮಾಳಗಿ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

loading...