ಪೊಲೀಸರ ಕ್ರಮಕ್ಕೆ ಬಿಜೆಪಿ ಆಕ್ರೋಶ

0
23
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಪೊಲೀಸ್ ಆಯುಕ್ತರ ಕಚೇರಿಯ ಎದುರು ರಸ್ತೆ ತಡೆ ನಡೆಸಿ, ಕಾಂಗ್ರೇಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿ ಬಿಜೆಪಿ ನಾಯಕರು ಇಂದು ಪ್ರತಿಭಟನೆ ನಡೆಸಿದ್ದರು.
ಶಾಸಕ ಸಂಜಯ ಪಾಟೀಲ ಮಾತನಾಡಿ, ಕಳೆದ ಹಲವು ತಿಂಗಳಿಂದ ಹಿಂದೂ ಜನರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಗಲಭೆ ನಡೆದ ದಿನದಂದು ಸಿಸಿ ಕ್ಯಾಮೇರಾ ಬಂದ್ ಆಗುತ್ತಿವೆ ಇದರ ಹಿಂದಿನ ಕರಾಮತ್ತೇನು ಎಂದರು.
ಹಿಂದೂ ದೇವಾಲಯ ನಾಶ ಪಡಿಸುತ್ತಿದ್ದಾರೆ. ಮಸೀದಿಯಲ್ಲಿ ಪಾಕಿಸ್ತಾನದ ಮೆಚ್ಚುಗೆ ಮಾತನಾಡಿದ್ದರು. ಪೊಲೀಸ್‍ರು ಕ್ರಮಕೈಗೊಳ್ಳುತ್ತಿಲ್ಲ. ಶಾಸಕ ಫಿರೋಜ್ ಸೇಠ್ 15 ನಿಮಿಷಗೂ ಹೆಚ್ಚುಕಾಲ ಮಾತನಾಡಿ ಬಂಧಿಸಿದ ಕೆಲವರನ್ನು ಬಿಡುಗಡೆಗೆ ಒತ್ತಾಯಿಸುತ್ತಾರೆ ಆದರೆ ಪೊಲೀಸ ಇಲಾಖೆ ಏನು ಮಾತನಾಡಿಲ್ಲ. ಮುಸ್ಲಿಂ ಮುಖಂಡರನ್ನು ಮಾತ್ರ ಸಭೆ ನಡೆಸಿದ್ದೀರಿ. ಆದರೆ ಹಿಂದೂ ಮುಖಂಡ ಸಭೆ ನಡೆಸಿಲ್ಲ. ಇದು ಒಂದೇ ಮತದ ಪರವಾಗಿ ಇರುವಂತೆ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಡಿಸಿಪಿ ಅಮನಾಥ ರೆಡ್ಡಿ ಮಾತನಾಡಿ, ಯಾರ ಒತ್ತಡ ಕ್ಕೆ ಮಣಿಯದೇ ಕೆಲಸ ನಿರ್ವಹಿಸಿದ್ದೇವೆ. ಕಲಬುರ್ಗಿ, ವಿಜಯಪುರ ಜೈಲಿಗೆ ಸ್ಥಳಾಂತರ ಮಾಡುತ್ತೇವೆ. ಎರಡು ಕೋಮಿನ ಜನರು ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ವಿಡಿಯೋ ಇದೆ. ಅದರ ಪ್ರಕಾರ ಬಂಧಿಸುತ್ತಿದೇವೆ. ಕೆಲವರು ಊರು ಬಿಟ್ಟಿದ್ದಾರೆ ಅಂತವರನ್ನು ಕೂಡಲೇ ಬಂಧಿಸುತ್ತಿದ್ದೇವೆ. ಎರಡಮೂರ ದಿನದಲ್ಲಿ ಸಿಸಿ ಕ್ಯಾಮರಾಗಳ ನೂರಷ್ಟು ಅಳವಡಿಸುತ್ತೇವೆ. ಹೆಣ್ಣು ಮಕ್ಕಳು ಭಾಗಿಯಾಗಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಗಲಭೆ ಬಗ್ಗೆ ಪೊಲೀಸರಿಗೆ ಗೋತ್ತಿದೆ. ಗಲಭೆ ಹಿಂದೆ ಮೂಲ ಬೇರೂ ಕಂಡು ಹಿಡಿಯಲು ಸಾಧ್ಯವಿಲ್ಲವೇನು. ಬಿಜೆಪಿ ಮುಖಂಡರು ಈಗವೆರೆಗೂ ಯಾರು ಗಲಭೆ ಮಾಡಿಲ್ಲ. ಸಂಪ್ರದಾಯದ ಪ್ರಕಾರ ಕಾರ್ಯಕ್ರಮಕ್ಕೆ ಅಡಚಣೆ ಮಾಡುತ್ತಿದ್ದಾರೆ. ಕೆಲವರು ಸಮಾಜದ ಕಾರ್ಯಕ್ರಮದಲ್ಲಿ ನಡೆದುಕೊಳ್ಳವವರ ಬಗ್ಗೆ ಸೂಕ್ಷ್ಮ ವಾಗಿ ನೋಡಿ. ಗಲಭೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಿಲ್ಲ. ಗಲಭೆ ಮಾಡುವವರಿಗೆ ಭದ್ರತೆ ಒದಗಿಸುತ್ತಿದ್ದೀರಿ ಎಂದು ಪೊಲೀಸ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಸಕ ಫಿರೋಜ್ ಸೇಠ್ ತಮ್ಮ ಜನರ ಏನು ಮಾಡುವಂತಿಲ್ಲ ಇದು ಎಂಬ ಹೇಳಿಕೆ ವೈರಲಾಗಿದೆ. ಈ ಬಗ್ಗೆಯೂ ಪೊಲೀಸರು ಕ್ರಮಕ್ಕೆ ಏಕೆ ಮುಂದಾಗಿಲ್ಲ.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಂದ್ರ ಹರಕುಣಿ, ರಾಜು ಟೋಪನ್ನವರ, ಪಿ.ಡಿ ದೋತ್ರೆ, ಕಿರಣ ಜಾಧವ, ಲೀಲಾ ಟೋಪನ್ನವರ, ಈರಣ್ಣಾ ಕಡಾಡಿ, ಅಭಯ ಪಾಟೀಲ ಮತ್ತು ಸದಾನಂದ ಗುಡೇಪ್ಪನ್ನವರ ಮತ್ತಿತತರು ಉಪಸ್ಥಿತರಿದ್ದರು.

loading...