ಪ್ರಕೃತಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು: ಸತೀಶ

0
31
loading...

ಕನ್ನಡಮ್ಮ ಸುದ್ಧಿ-ರಾಮದುರ್ಗ ನಮ್ಮ ಆಹಾರ ಪದ್ದತಿ ಸರಿ ಇಲ್ಲದಿರುವುದು, ಶರೀರಕ್ಕೆ ಅಗತ್ಯ ಇರುವ ಶ್ರಮ ಇಲ್ಲದಿರುವುದು, ಅತಿಯಾದ ಮಾನಸಿಕ ಒತ್ತಡ ಹಾಗೂ ದುಶ್ಚಟಗಳಿಂದ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದೆ. ನಮ್ಮ ಆರೋಗ್ಯ ಬೇರಾರ ಕೈಯಲ್ಲೂ ಇರುವದಿಲ್ಲ. ಅದು ನಮ್ಮಲ್ಲಿರುತ್ತದೆ. ಪ್ರಕೃತಿ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳಬೇಕು.
ಎಂದು ಹುಲಕೋಟಿಯ ಕೆ.ಎಚ್‌.ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯ ಆಪ್ತ ಸಮಾಲೋಚಕ ಡಾ. ಸತೀಶ ಹೊಂಬಾಳಿ ಹೇಳಿದರು.
ತಾಲೂಕಿನ ತುರನೂರ ಹತ್ತಿರದ ಎಫ್‌.ಟಿ.ಕೆರೂರ ಫಾರ್ಮ ಹೌಸ್‌ನಲ್ಲಿ ಕೆ.ಎಚ್‌.ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಹಾಗೂ ಅಚಿವರ್ಸ್‌ ಕಾಂಪಿಟೇಟಿವ ಕೋಚಿಂಗ್‌ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಂಡ 5 ದಿನಗಳ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶರೀರಕ್ಕೆ ಅಗತ್ಯ ಶ್ರಮಬೇಕು. ಮಾನಸಿಕ ಒತ್ತಡ ಮತ್ತು ದುಶ್ವಟಗಳಿಂದ ದೂರ ಉಳಿದುಕೊಂಡರೆ ಯಾವ ರೋಗವು ನಮ್ಮತ್ತ ಸುಳಿಯುವದಿಲ್ಲ ಎಂದು ಹೇಳಿದರು.
ಸಿ.ಪಿ.ಐ ಶ್ರೀನಿವಾಸ ಹಾಂಡ ಶಿಬಿರ ಉದ್ಘಾಟಿಸಿ ಮಾತನಾಡಿ, ಯಾಂತ್ರಿಕ ಜೀವನ ಕ್ರಮದಿಂದ ಅತಿಯಾದ ಒತ್ತಡಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಪ್ರಕೃತಿಯಲ್ಲಿ ಲಭ್ಯ ಇರುವ ಚಿಕಿತ್ಸೆಯಿಂದ ಎಲ್ಲ ಒತ್ತಡವನ್ನು ದೂರ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮ ಆಯೋಜನೆ ಮಾಡಿರುವ ಗದಗ ಸಿ.ಪಿ.ಐ ಅಜೀಜ್‌ ಕಲಾದಗಿ ಪ್ರಾಸ್ತಾವಿಕ ಮಾತನಾಡಿ, ಪ್ರಕೃತಿ ಚಿಕಿತ್ಸೆಯಿಂದ ಪರಿಣಾಮಕಾರಿ ಪ್ರತಿಫಲ ತಮ್ಮ ಕುಟುಂಬಕ್ಕೆ ಲಭಿಸಿದ್ದರಿಂದ ತಾಲೂಕಿನ ಜನರಿಗೆ ಅನುಕೂಲವಾಗಲೆಂದು ಪ್ರಕೃತಿ ಚಿಕಿತ್ಸೆ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಜನತೆ ಶಿಬಿರದ ಸದುಪಯೋಗ ಪಡೆಸಿಕೊಳ್ಳಬೇಕೆಂದು ಮನವಿ ಮಾಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್‌.ಎಸ್‌.ಜಿರಂಕಳಿ ಮಾತನಾಡಿ, ಪ್ರಕೃತಿ ಚಿಕಿತ್ಸೆ ತಾಲೂಕಿನಲ್ಲಿ ಪ್ರಪ್ರಥಮ ಭಾರಿಗೆ ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷವೂ ಹಮ್ಮಿಕೊಂಡು ಬಡಜನರಿಗೆ ಅನುಕೂಲ ಮಾಡಬೇಕೆಂದು ಸಂಘಟಿಕರಲ್ಲಿ ವಿನಂತಿಸಿದರು.
ನಿವೃತ್ತ ಮುಖ್ಯ ಶಿಕ್ಷಕಿ ಬಿ.ಜಿ.ಹೊಂಗಲ, ಪಿ.ಎಸ್‌.ಐ ಸುನೀಲಕುಮಾರ ನಾಯಕ, ಜೇಂಟ್ಸ್‌ ಗ್ರುಪ್‌ ಅಧ್ಯಕ್ಷ ತಾಜುದ್ದೀನ ಹುದ್ದಾರ ಮಾತನಾಡಿದರು. ಅಲಿಬಾಬಾ ಕಲಾದಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಉಮೇಶರಡ್ಡಿ ಗೊಂದಿ ಸ್ವಾಗತಿಸಿದರು. ಅಪ್ಪನಗೌಡ ಅರ್ಬನದ ನಿರೂಪಿಸಿದರು. ಪ್ರವೀಣ ಶೆಟ್ಟಿ ವಂದಿಸಿದರು.

loading...