ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು :ದೊಡ್ಡಬಸವನಗೌಡ

0
25
loading...

ಕುಷ್ಟಗಿ: ನಮ್ಮ ನಾಡಿನ ಕನ್ನಡಿಗರು ಇಂಗ್ಲೀಷ ಹಾಗೂ ಗಡಿ ಭಾಷೆಗಳಿಗೆ ಮಾರುಹೋಗಿದ್ದು ಮಾತೃಭಾಷೆಯನ್ನು ಗೌರವಿಸಿ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ಹೇಳಿದರು.
ಇಲ್ಲಿನ ಸಂತೆ ಮೈದಾನದಲ್ಲಿ ಕನಾರ್ಟಟಕ ರಕ್ಷಣಾ ವೇದಿಕೆ(ನಾ.ಬ) ವತಿಯಿಂದ 62ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಗಡಿ ಭಾಗಗಳಲ್ಲಿನ ಭಾಷೆಗಳನ್ನು ಮೈಗೂಡಿಸಿಕೊಳ್ಳುತ್ತಾ ಮಾತೃ ಭಾಷೆಯನ್ನು ಮರೆಮಾಚುತ್ತಿದ್ದಾರೆ. ಕನ್ನಡವನ್ನು ಬೆಳೆಸಲು ಇಚ್ಚಾಸಕ್ತಿಯ ಕೊರತೆ ಯದ್ದು ಕಾಣುತ್ತಿದೆ. ಬದುಕುವುದಕ್ಕೆ ನಾವು ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ನಮ್ಮ ಮನೆಯ ಮೊದಲ ಆಧ್ಯತೆ ಕನ್ನಡವಾಗಿರಬೇಕು. ಕನ್ನಡವೇ ನಮ್ಮ ಮೈಮನ ತುಂಬಿಕೊಳ್ಳಬೇಕು. ಕನ್ನಡವನ್ನು ನಾವೆಲ್ಲರೂ ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾವೇದಿಕೆ ಯಂತಹ ಅನೇಕ ಕನ್ನಡ ಪರ ಸಂಘಟನೆಗಳು ಕನ್ನಡಕ್ಕಾಗಿ ಶ್ರಮಿಸಿ ಉಳಿಸುವಲ್ಲಿ ಭಾಷೆ ಸ್ವಾಭಿಮಾನದ ಕಿಚ್ಚು ಹೊತ್ತಿಸುವಲ್ಲಿ ಅವಿರತವಾಗಿ ಪ್ರಯತ್ನಿಸುತ್ತಿವೆ. ಇದು ನಿಜಕ್ಕೂ ಸ್ವಾಗತಾರ್ಹ ವಿಷಯವಾಗಿದೆ. ಕನ್ನಡ ಶಾಲೆಗಳು ಸಹ ಇಂದು ಮುಚ್ಚುವ ಹಂತದಲ್ಲಿದ್ದು ಉದ್ಯಮಿಗಳು, ರಾಜಕೀಯ ಮುಖಂಡರು ಬಡವರು ಸೇರಿದಂತೆ ಪ್ರತಿಯೊಬ್ಬರೂ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಇಂದು ಕನ್ನಡ ಶಾಲೆಗಳೂ ಸಹ ಹೆಚ್ಚಿನ ಸೌಲತ್ತುಗಳನ್ನು ಹೊಂದಿದ್ದು ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ನುರಿತ ಶಿಕ್ಷಕರ ಪಡೆ ಕನ್ನಡ ಶಾಲೆಯಲ್ಲೆ ಹೆಚ್ಚಿನ ಮಟ್ಟದಲ್ಲಿದ್ದು ಕನ್ನಡ ಶಾಲೆಯಲ್ಲಿಯೇ ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸಿ ಎಂದರು.
ಚನ್ನಪ್ಪ ನಾಲಗಾರ, ಸಂಗಮೇಶ ಕಂದಕೂರು, ಸಂತೋಷ ಸರಗಣಾಚಾರಿ, ರವೀಂದ್ರ ಬಾಕಳೆ, ಸಂಗಮೇಶ ಸೇರಿದಂತೆ ಇನ್ನಿತರರು ಇದ್ದರು.

loading...