ಪ್ರಾಮಾಣಿಕವಾಗಿ ಕೆಲಸಮಾಡುತ್ತಿದ್ದೆನೆ: ಮಧುಸೂಧನ ಶೇಟ್‌

0
26
loading...

ಕುಮಟಾ: ನನಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡುವ ಗುರಿ ಹೊಂದಿದ್ದೇನೆ. ಪುರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೆನೆ ಎಂದು ಪುರಸಭೆ ಅಧ್ಯಕ್ಷ ಮಧುಸೂಧನ ಶೇಟ್‌ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಹೆರವಟ್ಟಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರು, ಪಾಲಕರು-ಪೋಷಕರು, ಶಿಕ್ಷಕರು ಹಾಗೂ ಊರನಾಗರಿಕರು ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುರಸಭೆಯಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ. ಹಾಗಾಗಿ ನನ್ನ ಅವಧಿಯಲ್ಲಿ ಸ್ವಚ್ಛ, ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಕೆಲಸಮಾಡುತ್ತೇನೆ. ಎಲ್ಲಾ ರಾಜಕೀಯ ಪಕ್ಷದ ಸದಸ್ಯರನ್ನು ಸಮಾನವಾಗಿ ನೋಡುತ್ತೇನೆ. ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ಒಳಚರಂಡಿ ಕಾಮಗಾರಿಯಿಂದ ಜನರಿಗೆ ತೊಂದರೆಯಾಗಿದೆ. ಹಾಗಾಗಿ ಪಟ್ಟಣದ ಯಾವೆಲ್ಲ ರಸ್ತೆಗಳು ಹದಗೆಟ್ಟಿವೆಯೋ ಆ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಿಕೊಡುವ ವರೆಗೂ ಒಳಚರಂಡಿ ಮಂಡಳಿಯ ಬೆನ್ನು ಬಿಡುವುದಿಲ್ಲ. “ಸ್ವಚ್ಛ ಕುಮಟಾ” ಮಾಡುವ ಉದ್ದೇಶ ನನ್ನದಾಗಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಹಲವು ಯೋಜನೆಗಳನ್ನು ನೀಡಿದೆ. ಅಲ್ಲದೇ ಈ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಈ ಶಾಲೆಯಿಂದ ಶಿಕ್ಷಣ ಪಡೆದ ಅನೇಕರು ಉನ್ನತ ಉದ್ಯೋಗದಲ್ಲಿದ್ದಾರೆ. ಅಲ್ಲದೇ ಇಲ್ಲಿನ ಎಸ್‌ಡಿಎಂಸಿ ಸದಸ್ಯರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗೆ ಪುರಸಭೆಯಿಂದ ಎನಾದರು ಕೆಲಸವಾಗಬೇಕೆಂದರೆ ಅದಕ್ಕೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗಣಪತಿ ಪ್ರಭು, ವಿಜಯಾನಂದ ಗೋಳಿ, ಬೀರಣ್ಣ ನಾಯಕ, ದೇವರಾಯ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಗೌಡ, ಉಪಾಧ್ಯಕ್ಷೆ ಸುಧಾ ನಾಯ್ಕ, ಸದಸ್ಯರಾದ ಸತೀಶ ಭಟ್‌, ಶ್ರೀಧರ ಪಟಗಾರ, ಸುರೇಶ ಶೇಟ್‌, ಶಾಲಾ ಮುಖ್ಯಾಧ್ಯಾಪಕಿ ಮಂಗಲಾ ನಾಯ್ಕ, ಅಂಗನವಾಡಿ ಶಿಕ್ಷಕಿ ತಾರಾ ಶೆಟ್ಟಿ ಹಾಗೂ ಪಾಲಕರು ಮತ್ತು ಊರನಾಗರಿಕರು ಉಪಸ್ಥಿತರಿದ್ದರು.

loading...