ಫೇಸ್ ಬುಕ್‌ ನಲ್ಲಿ ಸಂಸದೆ ಶೋಭಾ ವಿರುದ್ಧ ಅವಹೇಳನಕಾರಿ ಫೋಸ್ಟ್

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವಹೇಳಕಾರಿ ಪೋಸ್ಟ್ ಮಾಡಿದ ಘಟನೆ ನಡೆದಿದೆ.
ಕಾಂಗ್ರೆಸ್ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಯಿಂದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಸವದತ್ತಿ ತಾಲೂಕಿನ ಇಮ್ಮತಿಯಾಜ್ ಸಂಗ್ರೆಸಕೋಪ್ಪ ನಿಂದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವಹೇಳನಕಾರಿ ಫೋಸ್ಟ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.
ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಇಮತಿಯಾಜ್ ಉಮೇಶ್ ರೆಡ್ಡಿ ಹಿಂದೂ ಮಹಿಳೆಯರನ್ನ ರೇಪ್ ಮಾಡಿದ್ದಾನೆ. ಉಮೇಶ ರೆಡ್ಡಿ ಮುಸ್ಲಿಂ ಆಗಿದ್ರೆ ಶೋಭಾ ಕರಂದ್ಲಾಹೆ ಕಚ್ಚೆ ಹಾಕಿಕೊಂಡು ಓಡಾಡುತ್ತಿದ್ದಳು ಎಂದು ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ಇಮ್ಮತಿಯಾಜ್ ತನ್ನ ಫೇಸ್ಬುಕ ಖಾತೆಯಲ್ಲಿ ಶಿರ್ಷಿಕೆಯಡಿ ಅವಹೇಳನಕಾರಿ ಪೋಸ್ಟ್ ಮಾಡಿರುವುದು ಬಿಜೆಪಿ ನಾಯಕರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

loading...