ಬಂದ್ ಹೆಸರಿನಲ್ಲಿ ಆಟೋ ಚಾಲಕರಿಂದ ಪ್ರಯಾಣಿಕರ ಸೂಲಿಗೆ

0
33
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:28 ಉತ್ತರ ಕರ್ನಾಟಕದ ಮಹದಾಯಿ ನದಿ ನೀರಿಗಾಗಿ ಈ ಭಾಗದ ರೈತರು ಹಾಗೂ ಜನರು ಪ್ರತಿಭಟನೆ ನಡೆಸುತ್ತಿದ್ದರೇ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರು ಬಂದ್ ನ ಲಾಭ ಪಡೆದು ಸಾರ್ವಜನಿಕರ ಹಣವನ್ನು ಕೊಳ್ಳೆಹೊಡೆಯುತ್ತಿದ್ದಾರೆ.
ಉತ್ತರ ಕರ್ನಾಟಕದ ಜೀವ ಜಲವಾದ ಮಹದಾಯಿ ನದಿ ನೀರು ಹಂಚಿಕೆಯ ವಿಚಾರವಾಗಿ ಬುಧವಾರ ಬಂದ್ ಕರೆಯಲಾಗಿದೆ. ನಗರದಿಂದ ಬೇರೆ ಪ್ರದೇಶಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದರೂ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರ ದರ್ಬಾರ್ ಹೆಚ್ಷಾಗಿದೆ.
ನಗರದಲ್ಲಿ ಸಂಚರಿಸುವ ಆಟೋಗಳಿಗೆ ಮೀಟರ್ ಅಳವಡಿಸಬೇಕೆಂಬ ಬಹುವಷ೯ಗಳ ಬೇಡಿಕೆ ಇದ್ದರೂ ಅದನ್ನು ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ ವಿಫಲವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಈ ಹಿಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಸಾವ೯ಜನಿಕರ ಹಿತ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಒಂದು ತಿಂಗಳಲ್ಲಿ ನಗರದಲ್ಲಿರುವ ಆಟೋಗಳಿಗೆ ಆರ್ ಟಿಓ ಹಾಗೂ ಪೊಲೀಸ್ ಇಲಾಖೆ ಮೀಟರ್ ಅಳವಡಿಸದಿದ್ದರೇ ಸರಕಾರಕ್ಕೆ ಈ ಇಲಾಖೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಎಚ್ಚರಿಕೆ‌ ನೀಡಿದ್ದರು.
ಆದರೆ ವಿಪರ್ಯಾಸವೆಂದರೆ ಆ ಸಂದರ್ಭದಲ್ಲಿ ಪ್ರಭಾವಿ ಶಾಸಕರ ಒತ್ತಡಕ್ಕೆ ಮಣಿದು ನಗರದ ಆಟೋ‌ಮೀಟರ್ ಅಳವಡಿಕೆ ಮರಿಚಿಕಿಯಾಗಿಯೇ ಉಳಿದಿತ್ತು.
ಕೇಂದ್ರ ಬಸ್ ನಿಲ್ದಾಣದಿಂದ ಚನ್ನಮ್ಮ ‌ವೃತ್ತಕ್ಕೆ 80 ರೂ. ಮಹಾಂತೇಶ ನಗರ 150, ಟಿಳಕವಾಡಿ, 250, ಮಚ್ಚೆ 400, ಶಾಹುನಗರ 200, ಅಶೋಕ ನಗರ, 80, ಶಿವಬಸವ ನಗರ 100 ರೂ. ನಿಗದಿ ಮಾಡಿ ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಪ್ರಯಾಣಿಕರು ಪೀಡಿಸುತ್ತಿರುವ ಆಟೋ ಚಾಲಕರು, ಏಜಂಟರುಗಳು. ಇನ್ನಾದರೂ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಆಟೋ ಮೀಟರ್ ಅಳವಡಿಕೆಯಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವವರೇ ಕಾದು ನೋಡಬೇಕಿದೆ.

loading...