ಬಸವ ವಸತಿ ಯೋಜನೆ ಅಡಿ 2460 ಮನೆಗಳು ಮಂಜೂರು: ಶಾಸಕ ಬಾಲಚಂದ್ರ

0
62
loading...

ಕನ್ನಡಮ್ಮ ಸುದ್ದಿ-ಗೋಕಾಕ: ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ದುರದುಂಡಿ ಗ್ರಾಮ ಪಂಚಾಯತಿಯ ಪ್ರಸಕ್ತ ಸಾಲಿನ ಬಸವ ವಸತಿ ಯೋಜನೆಯ 58 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದ ಅವರು.
ಬಸವ ವಸತಿ ಯೋಜನೆಯಡಿ ಪ್ರತಿ ಫಲಾನುಭವಿಗೆ 1.52 ಲಕ್ಷ ರೂ.ಗಳನ್ನು ಮನೆಗಳ ನಿರ್ಮಾಣಕ್ಕೆ ಕೊಡಲಾಗುತ್ತಿದೆ. ಇದರಲ್ಲಿ 1.32 ಲಕ್ಷ ರೂ. ಸರ್ಕಾರದಿಂದ ಹಾಗೂ 20 ಸಾವಿರ ರೂ.ಗಳು ನರೇಗಾ ಯೋಜನೆಯಡಿ ನೀಡಲಾಗುತ್ತಿದೆ. ಅರಭಾವಿ ಮತಕ್ಷೇತ್ರದಲ್ಲಿ ಬಸವ ವಸತಿ ಯೋಜನೆಯಡಿ 2460 ಮನೆಗಳ ನಿರ್ಮಾಣಕ್ಕೆ ಒಟ್ಟು ಸರ್ಕಾರದಿಂದ 37.39 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ, ಗ್ರಾಪಂ ಸದಸ್ಯರಾದ ಮಹಾನಂದಾ ಪೂಜೇರಿ, ಗಂಗವ್ವಾ ಪೂಜೇರಿ, ಮಲ್ಲವ್ವ ಅರಭಾವಿ, ಸಿದ್ರಾಮ ಅಂತರಗಟ್ಟಿ, ಯಲ್ಲವ್ವಾ ವಗ್ಗನ್ನವರ, ಬಿಜೆಪಿ ಅರಭಾವಿ ಮಂಡಲ ಉಪಾಧ್ಯಕ್ಷೆ ಇಂದಿರಾ ಸಿದ್ದಪ್ಪ ಅಂತರಗಟ್ಟಿ, ಮುಂತಾದವರು ಉಪಸ್ಥಿತರಿದ್ದರು.ಪಂಚಾಯತಿಗೆ ಬಸವ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸುತ್ತಿರುವುದು.

loading...