ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ: ಪಂಜಿನ ಮೆರವಣಿಗೆ

0
28
loading...

ಬಸವನಬಾಗೇವಾಡಿ: ವಿಜಯಪುರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಬಾಲಕಿ ದಾನೇಶ್ವರಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.
ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ಜಮಾಸಿದ ಕಾರ್ಯಕರ್ತರು ಪಂಜಿನ ಮೆರವಣಿಗೆ ಮೂಲಕ ದುಷ್ಕರ್ಮಿಗಳ ವಿರೋಧ ಘೋಷಣೆ ಕೂಗುತ್ತಾ ಪೊಲೀಸ್ ಠಾಣೆ, ಹೆಸ್ಕಾಂ ವಿಭಾಗ ಕಚೇರಿ ಮುಂಭಾಗದಲ್ಲಿ ಹಾಯ್ದು ವಿದ್ಯಾರಣ್ಯ ಗ್ರಂಥಾಲಯ, ಗಣಪತಿ ವೃತ್ತ, ಚನ್ನಬಸವೇಶ್ವರ ವೃತ್ತ, ನಿಯೋಜಿತ ಮೆಗಾ ಮಾರ್ಕೆಟ್ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಮೃತ ಬಾಲಕಿ ದಾನೇಶ್ವರಿ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ತಾಲೂಕಾ ಸಂಚಾಲಕ ಪರಶುರಾಮ ದಿಂಡವಾರ, ನಗರ ಸಂಚಾಲಕ ರಾಜು ಫಿರಂಗಿ, ತಮ್ಮಣ್ಣ ಖಾನಾಗಡ್ಡಿ, ಸದಾಶಿವ ಕುಬಕಡ್ಡಿ, ಪರಶುರಾಮ ಚಿರಲದಿನ್ನಿ, ನ್ಯಾಯವಾದಿ ಸುರೇಶ ಚೂರಿ, ಬಸು ಕನ್ನಾಳ, ಹೊನ್ನಪ್ಪ ಕಣಕಾಲ, ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ರುಕ್ಮೀಣಿ ರಾಠೋಡ, ಸರಿತಾ ಬಂಗಾರಿ, ಅಬ್ದುಲ್ ಡೋಣೂರ, ಪಾರ್ವತಿ ನಡಗೇರಿ, ಲೋಹಿತ ನಡಗೇರಿ, ಕುಮಾರ ಮ್ಯಾಗೇರಿ, ಮಹೇಶ ಮಾದರ, ಕಣಕೇಶ ಬಾಗೇವಾಡಿ ಸೇರಿದಂತೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದರು.

loading...