ಬಿಜೆಪಿ‌ ಕಿರುಕುಳದಿಂದ ಕಾಂಗ್ರೆಸ್ ಪಕ್ಷ‌ಕ್ಕೆ ಸೇರಿದ್ದೇ‌ನೆ: ಮಲ್ಲಮ್ಮ

0
30
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:20 ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ‌ ಯೋಗಿಶ ಗೌಡರ ಹತ್ಯೆಯಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡಿದ್ದಾರೆ. ಆ ಪಕ್ಷದಿಂದ‌ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇ‌ನೆ ಎಂದು ಯೋಗಿಶ ಗೌಡ ಪತ್ನಿ ಮಲ್ಲಮ್ಮ ಹೇಳಿದರು.
ಅವರು‌ ಬುಧವಾರ ನಗರದ ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಸ್ವ ಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ‌. ಬಿಜೆಪಿಯವರು ಕಿರಿಕಿರಿಯನ್ನು ನೀಡುತ್ತಿದ್ದಾರೆ ಎಂದು ಸಿಎಂ ಅವರಲ್ಲಿ ವಿನಂತಿ‌ಮಾಡಿಕೊಂಡಿಕೊಂಡ ನಂತರ ನಾನು‌ ಕಾಂಗ್ರೆಸ್ ಪಕ್ಷಕ್ಕೆ‌ಸೇರ್ಪಡೆಗೊಂಡಿದ್ದೇನೆ ಎಂದರು.
ಯೋಗಿಶ್ ಗೌಡ ಪತ್ನಿ ಮಲ್ಲಮ್ಮ ಅಧಿಕೃತವಾಗಿ ಕೆಪಿಸಿಸಿ‌ ಮಹಿಳಾ‌ ಘಟಕದ ಅಧ್ಯಕ್ಷೆ ಲಕ್ಷ್ಮೀ‌ ಹೆಬ್ಬಾಳಕರ ನೇತೃತ್ವದಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಕಳೆದ ಒಂದು‌ ವರ್ಷದ ಹಿಂದೆ ಬಿಜೆಪಿ ಜಿಪಂ ಸದಸ್ಯ ಯೋಗಿಶ್ ಗೌಡ ಅವರ ಜಿಮ್ ನಲ್ಲಿ ಬರ್ಬರ ಹತ್ಯೆ ಮಾಡಲಾಗಿತ್ತು. ಧಾರವಾಡದ ಉಸ್ತುವಾರಿ ಸಚಿವ ವಿನಯ ಕುಲಕರ್ಣಿಯವರ ಮೇಲೆ‌ ಕೊಲೆ‌ ಮಾಡಿಸಿದ್ದಾರೆ ಎಂದು ಆರೋಪಸಿದ್ದರಲ್ಲದೆ, ಗೃಹ‌ ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಪಾಲರಿಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸಿವಂತೆ ಒತ್ತಡ ಹಾಕಿದ್ದರು. ಸದ್ಯ ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು ಹಾಗೂ‌ ನನ್ನ ಕುಟುಂಬಸ್ಥರು ಹಾಗೂ ತವರು ಮನೆಯವರು ನನ್ನ ಗಂಡನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೇಳಿದರೇ ನಾನೂ ಸಹಿತ ಮುಖ್ಯಮಂತ್ರಿಗಳಲ್ಲಿ ಸಿಬಿಐಗೆ ವಹಿಸುವಂತೆ ಒತ್ತಾಯಿಸುವೆ ಎಂದರು.
ಇತ್ತೀಷೆಗೆ ಮಲ್ಲಮ್ಮಳ ಕುಟುಂಬ ಹಾಗೂ ತವರು ಮನೆಯ‌ ವಿರೋಧದ ನಡೆವುವೆಯೂ‌ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡಗೊಂಡಿದ್ದಾರೆ.ಮಲ್ಲಮ್ಮಳನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂದು ಯೋಗೇಶಗೌಡ ಸಹೋದರರು ಆರೋಪಿಸಿದ್ದರು.

loading...