ಬಿಜೆಪಿ ಗೆಲುವು ಸಿಹಿ ಹಂಚಿ ಸಂಭ್ರಮ

0
13
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಗುಜರಾತ್‌ ಮತು ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ನಗರದ ಬಿಜೆಪಿ ಘಟಕವು ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಆಚರಿಸಿತು. ಪರೇಶ್‌ ಮೆಸ್ತಾ ಹತ್ಯೆಯ ಹಿನ್ನೆಲಯಲ್ಲಿ ವಿಜಯೋತ್ಸವವನ್ನು ಆಚರಿಸದೆ, ನಗರದ ದಾಂಡೇಲಪ್ಪಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುಧಾಕರ ರೆಡ್ಡಿ, ಪಕ್ಷದ ಮುಖಂಡರುಗಳಾದ ರೋಶನ್‌ ನೇತ್ರಾವಳಿ, ಮಂಜುನಾಥ ಪಾಟೀಲ, ಚಂದ್ರಕಾಂತ ಕ್ಷೀರಸಾಗರ, ರವೀಂದ್ರ ಷಾ, ಪ್ರಶಾಂತ ಬಸೂರ್ತೆಕರ, ವಿಷ್ಣು ನಾಯರ್‌, ಭೀಮರಾವ್‌ ಪಾಟೀಲ, ಬುದವಂತ ಗೌಡ, ನೀಲಾ ಮಾದರ, ಪ್ರಕಾಶ ಬೇಟ್ಕಂ ಮೊದಲಾದವರು ಉಪಸ್ಥಿತರಿದ್ದರು.

loading...