ಬಿಲಿರಾನ್ ದ್ವೀಪಕ್ಕೆ ಅಪ್ಪಳಿಸಿದ ಚಂಡಮಾರುತ

0
42
loading...

ಮನಿಲಾ:  ಮಧ್ಯ ಫಿಲಿಪೈನ್ಸ್‍ನ ಬಿಲಿರಾನ್ ದ್ವೀಪದ ಮೇಲೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ ಮತ್ತು ಭೂಕುಸಿತಗಳಿಂದ 32 ಮಂದಿ ಮೃತಪಟ್ಟು ಅನೇಕರು ಕಣ್ಮರೆಯಾಗಿದ್ದಾರೆ.
ಪ್ರಕೃತಿಯ ರೌದ್ರಾವತಾರದಿಂದಾಗಿ ಕ್ರಿಸ್ ಮಸ್ ರಜೆಯಲ್ಲಿದ್ದ ಅನೇಕ ವಿದೇಶಿ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ ಹಾಗು ಸುಮಾರು 89 ಸಾವಿರ ಮಂದಿ ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ.
ಬಿಲಿರಾನ್ ದ್ವೀಪದ ಮೇಲೆ ನಿನ್ನೆ ಉಷ್ಣವಲಯದ ಕಾಯ್ ತಾಕ್ ಚಂಡಮಾರುತ ಅಪ್ಪಳಿಸಿ ಸಾವು-ನೋವು ಮತ್ತು ಅಪಾಯ ಹಾನಿ ಸಂಭವಿಸಿದೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತ ಮತ್ತು ಭೂಕುಸಿತದಿಂದ ಈ ದ್ವೀಪದ ನಾಲ್ಕು ಪಟ್ಟಣಗಳು ತತ್ತರಿಸಿವೆ. ಭೂಕುಸಿತದಿಂದ ಮಣ್ಣಿನ ರಾಶಿಯಲ್ಲಿ ಹುದುಗಿಹೋಗಿದ್ದ 32 ಮಂದಿ ಶವಗಳನ್ನು ಹೊರತೆಗೆಯಲಾಗಿದೆ.
ಉರುಳಿಬಿದ್ಧ ಕಟ್ಟಡಗಳ ಭಗ್ನಾವಶೇಷಗಳ ಅಡಿ ಅನೇಕ ಮಂದಿ ಸಿಲುಕಿರುವ ಸಾಧ್ಯತೆ ಇದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಾಪತ್ತೆಯಾಗಿರುವ ನಾಗರಿಕರಿಗಾಗಿ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ.

loading...