ಬಿ.ಸಿ.ಎಲ್. ನಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಟಿಗಳು

0
20
loading...

ಬೆಂಗಳೂರು: ಪ್ರಮುಖವಾಗಿ ಕನ್ನಡ ಚಿತ್ರರಂಗದ ಸೆಲೆಬ್ರಟಿಗಳು ಆಡುವ ಬಾಕ್ಸ್ ಕ್ರಿಕೆಟ್ ಲೀಗ್ ತಂಡದಲ್ಲಿ ಕಳೆದ ವರ್ಷ ಆರು ತಂಡಗಳು ಪ್ರಮುಖವಾಗಿ ಪಾಲ್ಗೊಂಡಿದ್ದವು. ಈ ಬಾರಿ ಎಂಟು ತಂಡಗಳಾಗಿವೆ. ಈ ಬಾರಿ ನಡೆಯುವ ಒಟ್ಟು 27 ಪಂದ್ಯಗಳಲ್ಲಿ ಸುಮಾರು 150ಕ್ಕೂ ಹಚ್ಚು ತಾರೆಯರು ಭಾಗವಹಿಸಲಿದ್ದಾರೆ. ಶಿವಮೊಗ್ಗ, ಕಲಬುರಗಿ ಈ ಬಾರಿ ಹೊಸದಾಗಿ ಸೇರಿರುವ ತಂಡಗಳು. ಬೆಂಗಳೂರು ಡ್ರಾಗನ್ಸ್, ಮೈಸೂರು ಟೈಗರ್ಸ್, ಬಳ್ಳಾರಿ ಬ್ಲಾಸ್ಟರ್ಸ್, ಹುಬ್ಬಳ್ಳಿ ಹಂಟರ್ಸ್, ಮಂಗಳೂರು ಶಾರ್ಕ್, ಶಿವಮೊಗ್ಗ ಸ್ಟಾಲಿನ್, ದಾವಣಗೆರೆ ಲಯನ್ಸ್ ಮತ್ತು ಗುಲ್ಬರ್ಗಾ ಗ್ಲಾಡಿಯೇಟರ್ಸ್ ಹೀಗೆ ಎಂಟು ತಂಡಗಳು ಈ ಬಾರಿಯ ಬಿಸಿಎಲ್ ಪಂದ್ಯದಲ್ಲಿ ಭಾಗವಹಿಸಿ ಆಡಲಿವೆ.
2016ರಲ್ಲಿ ಹೆಚ್ಚಾಗಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿತ್ತು. ಅವರುಗಳು ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಅನುಚಿತವಾಗಿ ನಡೆದುಕೊಂಡಿದ್ದರು. ಹಾಗಾಗಿ ಈ ಸಲ ಕೇವಲ ನುರಿತ ಕಲಾವಿದರಿಗೆ ಮಾತ್ರ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪ್ರತಿ ಪಂದ್ಯದಲ್ಲಿ 10 ಪುರುಷರು, ಮಹಿಳೆಯರು ಆಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಂಡದ ನೇತೃತ್ವ ವಹಿಸಿಕೊಂಡಿರುವ ನಿರ್ಮಾಪಕ ಕಮರ್ ಹೇಳಿಕೊಂಡರು. ಇನ್ನು ಈ ಪಂದ್ಯದಲ್ಲಿ ಭಾಗವಹಿಸುವ ಕಲಾವಿದರಿಗೆ ಸ್ಪಾಂಜ್ಬಾಲ್ ಕ್ರಿಕೆಟ್ ತರಬೇತಿಯನ್ನು ಒಂದು ವಾರದ ಕಾಲ ನೀಡಲಿದ್ದು, ನಂತರ ಅವರನ್ನು ಆಖಾಡಕ್ಕೆ ಕಳುಹಿಸುತ್ತಾರೆ. ನಾಗರಬಾವಿಯಲ್ಲಿರುವ ಆಕಾಶ್ ಸ್ಟುಡಿಯೋದಲ್ಲಿ ಹದಿನೇಳು ಪಂದ್ಯಗಳ ಸಿದ್ಧತೆ ಇದೇ ತಿಂಗಳಲ್ಲಿ ಶುರುವಾಗಲಿದೆ. ಮೊದಲ ಸುತ್ತಿನಲ್ಲಿ ನಾಗರಾಜ್ ನಿರ್ಮಾಪಕರಾಗಿ ದಾವಣಗೆರೆ ತಂಡವನ್ನು ಪಡೆದುಕೊಂಡಿದ್ದಾರೆ. ಆದಿ ಲೋಕೇಶ್ ತಂಡದ ಕ್ಯಾಪ್ಟನ್ ಆಗಿದ್ದು, ಅದಿತಿ ರಾವ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇವರೊಂದಿಗೆ ಅಕ್ಷಯ್, ದೀಪಿಕಾದಾಸ್, ಸಭಾ ಸೇರಿದ್ದಾರೆ. ಬಿಸಿಎಲ್ ನ ಕ್ರಿಯೆಟೀವ್ ನಿರ್ದೇಶಕರಾಗಿ ಉದಯಕುಮಾರ್ ಹಾಗೂ ಆಕಾಶ್ ಪರ್ವ ಇದ್ದಾರೆ

loading...