ಭಾರತದ ಜೈಲುಗಳನ್ನು ಜರಿದ ಸಾಲಗಾರ ವಿಜಯ್ ಮಲ್ಯ

0
16
loading...

ಲಂಡನ್‌‌: ಭಾರತದ ರಾಷ್ಟ್ರೀಯ ಬ್ಯಾಂಕುಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಜೈಲಿನ ಭೀತಿಯಲ್ಲಿರುವ ಮದ್ಯದ ದೊರೆ, ಸುಸ್ತಿ ಸಾಲಗಾರ ವಿಜಯ್‌ ಮಲ್ಯ ಉದ್ಧತಟನದಲ್ಲಿ ಮಾತನಾಡಿದ್ದಾರೆ.
ಭಾರತದ ಜೈಲುಗಳು ಕಿರಿದಾಗಿದ್ದು, ಕೈದಿಗಳ ದಟ್ಟಣೆ ಹೆಚ್ಚಾಗಿದೆ. ಅಲ್ಲಿನ ಜೈಲುಗಳಲ್ಲಿ ನೈರ್ಮಲ್ಯದ ಕೊರತೆ ಇದೆ ಎಂದು ಲಂಡನ್‌ ಕೋರ್ಟ್‌ಗೆ ವಿಜಯ್‌ ಮಲ್ಯ ತಿಳಿಸಿದ್ದಾರೆ.
ಭಾರತದ ನಾನಾ ಬ್ಯಾಂಕ್‌ಗಳಲ್ಲಿ ವಿಜಯ್‌ ಮಲ್ಯ 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿ, ತೀರಿಸಲಾಗಿದೆ ದೇಶದಿಂದ ಪರಾರಿಯಾಗಿ, ಲಂಡನ್‌ನಲ್ಲಿದ್ದಾರೆ. ಆತ, ಬ್ಯಾಂಕುಗಳಿಗೆ ಹಣ ವಂಚಿಸಿದ ಪ್ರಕರಣವನ್ನು ಮಲ್ಯ ಎದುರಿಸುತ್ತಿದ್ದಾರೆ.
ಹೀಗಾಗಿ ಮಲ್ಯರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ಭಾರತ ಬೇಡಿಕೆ ಇಟ್ಟಿದೆ. ಈ ಸಂಬಂಧ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ವಿಚಾರಣೆ ವೇಳೆ ಭಾರತದ ಜೈಲುಗಳು ಕಿರಿದಾಗಿವೆ. ಜೈಲಿನಲ್ಲಿ ಕೈದಿಗಳು ದಟ್ಟಣೆ ಇದ್ದು, ಅಲ್ಲಿ ನೈರ್ಮಲ್ಯ ಹಾಗು ನೀರಿನ ಕೊರತೆ ಇದೆ. ಕೆಲ ಸಲ ಎರಡು ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ ಮಲ್ಯ ವಕೀಲರು ಹೇಳಿದ್ದಾರೆ.
ಮಲ್ಯ ಪರ ವಾದ ಮಂಡಿಸಿದ ಡಾ.ಅಲಾನ್‌‌ ಮಿಶೆಲ್‌, ಮುಂಬೈನ ಆರ್ಥರ್‌‌ ರಸ್ತೆಯ ಜೈಲು, ಕೋಲ್ಕತ್ತಾದ ಅಲಿಪೋರ್‌‌ ಹಾಗು ಚೆನ್ನೈನ ಜೈಲುಗಳನ್ನು ಉದಾಹರಣೆಯಾಗಿ ಕೊಟ್ಟು ಇಲ್ಲಿನ ಜೈಲುಗಳ ದುಃಸ್ಥಿತಿಯನ್ನು ವಿವರಿಸಿದ್ದಾರೆ.
ಜೊತೆಗೆ ಯಾವುದೇ ಕಾರಣವಿಲ್ಲದೇ ಜೈಲಿನ ಅಧೀಕ್ಷಕರು ಕೈದಿಯೋರ್ವನ ಮೇಲೆ ಲಾಠಿಯಿಂದ ಹೊಡೆದಿರುವ ಘಟನೆಯೂ ಸಹ ಭಾರತೀಯ ಜೈಲಿನಲ್ಲಿ ನಡೆದಿವೆ ಎಂದು ವಿವರಿಸಿದ್ದಾರೆ.

loading...