ಭ್ರಷ್ಠತೆಯಿಂದ ಕೂಡಿದ ಕಾಂಗ್ರೆಸ್‌ ಸರಕಾರ ಕಿತ್ತೋಗೆಯಿರಿ: ಯಡಿಯೂರಪ್ಪ

0
19
loading...

ಕನ್ನಡಮ್ಮ ಸುದ್ದಿ-ಇಂಡಿ: ದೇಶದಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಕಾಂಗ್ರೆಸ್‌ ಸರಕಾರವು ಆಡಳಿತವನ್ನು ಮಾಡಿದೆ. ಆದರೆ ಅದು ಬರೀ ಭ್ರಷ್ಠಾಚಾರವಾಗಿದ್ದು. ಯಾವುದೇ ಜನಪರ ಕಾರ್ಯ ಮಾಡಿಲ್ಲ ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಭಾರತವಾಗಬೇಕು ಎಂದು ಅವರ ಕನಸು ಅದನ್ನು ನಾವೇಲ್ಲರೂ ನನಸು ಮಾಡಲು ಪಣ ತೊಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.
ನಗರದ ಕೆಇಬಿ ಹತ್ತಿರವಿರುವ ಮೈದಾನದಲ್ಲಿ ಆಯೋಜಿಸಿದ್ದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯಾವುದೇ ಹಗರಣವಿಲ್ಲದೇ ನಿಷ್ಕಂಕವಾಗಿ ಉತ್ತಮ ಹಾಗೂ ಪಾರದರ್ಶಕ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ಅವರನ್ನು ಇಡೀ ಜಗತ್ತೇ ಹೊಗಳುತ್ತಿದೆ. ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದೆ. ಅಂತವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ? ಅವರನ್ನು ಟೀಕಿಸುವ ನೈತಿಕತೆ ನಿಮಗಿದೇಯೇ? ಮೋದಿ ಮುಂದೆ ನೀವೋಬ್ಬ ಬಚ್ಚಾ ಎಂದು ಯಡಿಯೂರೆಪ್ಪನವರು ಸಿದ್ಧರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆಧಿಕಾರದ ಮದದಿಂದ ದುರಂಕಾರದಿಂದ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಆದರೆ ಸಿದ್ಧರಾಮಯ್ಯನವರು ರಾಜ್ಯ ಕಂಡ ಅತ್ಯಂತ ಭ್ರಷ್ಠ
ಬಳ್ಳಾರಿ ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮಲು ಮಾತನಾಡಿ ದೇಶದಲ್ಲಿ ಮೋದಿ ಅಲೆಯಿದೆ. ಯಾವುದೊಂದು ಹಗರಣ ಮಾಡದೇ ಜಗತ್ತಿನಲ್ಲಿಯೇ ಭಾರತ ಮುನ್ನುಗ್ಗುತ್ತಿದೆ. ಇಡೀ ವಿಶ್ವವೇ ಇಂದು ಭಾರತವನ್ನು ಕೊಂಡಾಡುತ್ತಿದೆ. ಆದ್ದರಿಂದ ಇಂತಹ ಕಾಂಗ್ರಸ್‌ ಭ್ರಷ್ಠ ಸರಕಾರವು ನಮಗೆ ಬೇಕವೋ? ಅಲ್ಲದೇ ಉತ್ತಮ ಜನಪರ ಸರಕಾರ ನಮಗೆ ಬೇಕಾದರೆ ಬಿಜೆಪಿಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ, ಇಂಡಿ ಬಿಜೆಪಿ ಮಂಡಲ ಅಧ್ಯಕ್ಷ ಕಾಸೂಗೌಡ ಬಿರಾದಾರ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ, ಹಣಮಂತ ನಿರಾಣಿ, ಮಾಜಿ ಶಾಸಕ ಸಾರ್ವಭೌಮ ಬಗಲಿ, ರವಿಕಾಂತ ಪಾಟೀಲ, ಬಾಬುಗೌಡ ಬಿರಾದಾರ, ಪಾಪು ಕಿತ್ತಳಿ, ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ, ವಿರಾಜ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಭೀಮನಗೌಡ ಪಾಟೀಲ, ರವಿಕಾಂತ ಬಗಲಿ, ಸಿದ್ದಲಿಂಗ ಹಂಜಗಿ, ಮುತ್ತುರಾಜ ದೇಸಾಯಿ, ಪುಟ್ಟುಗೌಡ ಪಾಟೀಲ, ಸುನೀಲ ರಬಶೆಟ್ಟಿ, ಶ್ರೀಮಂತ ಬಾರಿಕಾಯಿ, ಯಮುನಾಜಿ ಸಾಳುಂಕೆ,ನೂರಾರು ಕಾರ್ಯಕರ್ತರು ಇದ್ದರು. ಮೊದಲಿಗೆ ಬಿಜೆಪಿ ಇಂಡಿ ಮಂಡಲದ ಅಧ್ಯಕ್ಷ ಕಾಸೂಗೌಡ ಬಿರಾದಾರ ಸ್ವಾಗತಿಸಿದರು. ಪ್ರೋ.ಸಿದ್ದಲಿಂಗ ಹಂಜಗಿ ನಿರೂಪಿಸಿದರು. ಸುನೀಲ ರಬಶೆಟ್ಟಿ ವಂದಿಸಿದರು.

loading...