ಮಠಗಳು ಸಮಾಜ ಪರಿವರ್ತನೆಯ ಕೇಂದ್ರಗಳಾಗಿವೆ: ಸಚಿನ

0
23
loading...

ಕನ್ನಡಮ್ಮ ಸುದ್ದಿ-ಬೀಳಗಿ: ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಆಧ್ಯಾತ್ಮದ ಅರಿವು, ಶಿಕ್ಷಣ ದಾಸೋಹ, ಶರಣ ಸಂಸ್ಕೃತಿಯ ಪುನರ್‌ ನಿರ್ಮಾಣದ ಪ್ರಯತ್ನ ಮಾಡುತ್ತ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿರುವ ನಾಡಿನ ಮಠಮಾನ್ಯಗಳ ಪಾತ್ರ ಅತ್ಯಂತ ಹಿರಿದಾದುದು, ಜ್ಞಾನವನ್ನು ಗುರುತಿಸಿ ಒಂದು ಮೆಚ್ಚುಗೆ ಮತ್ತು ಒಂದು ಅಭಿನಂದನೆ ನೀಡಿ ಸಾಕು ಎಂದು ಪತ್ರಕರ್ತ ಸಚಿನ ದೇಸಾಯಿ ಅಭಿಪ್ರಾಯ ಪಟ್ಟರು.
ಗುರುಪಾದ ಶಿವಾಚಾರ್ಯರ 46 ನೆಯ ಪುಣ್ಯಸ್ಮರಣೋತ್ಸವ ನಿಮಿತ್ಯವಾಗಿ ಪಟ್ಟಣದ ಶ್ರೀಕಲ್ಮಠದಲ್ಲಿ ಗುರುಪಾದ ದೇವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರೇಗುದ್ದಿಯ ದಿಗಂಬರೇಶ್ವರ ಮಠದ ಪ್ರಭುತೋಂಟದಾರ್ಯ ಸ್ವಾಮಿಜಿಗಳನ್ನು, ಕೊಟ್ಟೂರೇಶ್ವರ ಮಠದ ಅಭಿನವ ಕೊಟ್ಟೂರೇಶ್ವರೇಶ್ವರ ಸ್ವಾಮಿಗಳನ್ನು, ಕೊಣ್ಣೂರ ಹೊರಗಿನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರನ್ನು ಮತ್ತು ವಿವಿಧ ಮಾಧ್ಯಮಗಳ ಪ್ರತಿನಿಧಿಗಳಾದ, ವಿಠ್ಠಲ ಬಾಗೇವಾಡಿ, ಸುಭಾಸ ರಾಠೋಡ, ವಿರುಪಾಕ್ಷಿ ಹಿರೇಮಠ, ಡಿ.ಎಮ್‌.ಸಾಹುಕಾರ, ಪ್ರಕಾಶ ಸುಣಗಾರ, ಚನಬಸು ಚಲವಾದಿ, ಆನಂದ ಜಡಿಮಠ, ವಿ.ಜಿ.ರೇವಡಿಗಾರ ಸ್ವಾಗತಿಸಿದರು, ಬಸವರಾಜ ಉಮಚಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಗುರುರಾಜ ಲೂತಿ, ಸೋಮಲಿಂಗ ಬೇಡರ ನಿರೂಪಿಸಿದರು. ಸಂತೋಷ ಕೊಲ್ಹಾರ ವಂದಿಸಿದರು.

loading...