ಮನೆ ಮಂಜೂರು ಮಾಡುವಂತೆ ಪ್ರತಿಭಟನೆ

0
36
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ನಗರದ ಶ್ರೀನಗರದ ಜೋಪಡ ಪಟ್ಟಿಯ ನಿವಾಸಿಗಳ ಮನೆ ಮಂಜೂರಾತಿ ಮಾಡಬೇಕು ಎಂದು ಮಂಗಳವಾರ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯದ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ 30 ವರ್ಷಗಳಿಂದ ಶ್ರೀನಗರದ ಗಾರ್ಡನ್ ಪಕ್ಕದಲ್ಲಿ ಸಣ್ಣ-ಪುಟ್ಟ ಜೋಪಡಿಗಳನ್ನು ಹಾಕಿಕೊಂಡು ಚಳಿ-ಗಾಳಿ ಮಳೆಯನ್ನದೆ ಉಪಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂಂದು ಅನೇಕ ಸಲ ಸಂಬಂಧ ಪಟ್ಟವರಿಗೆ ಮನವಿಗಳನ್ನು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
2014ರಲ್ಲಿ ರಾಜ್ಯ ಸರಕಾರ ತಮ್ಮ ಸಮಸ್ಯೆಗೆ ಸ್ಪಂದಿಸಿ 150 ಕುಟುಂಬಗಳಿಗೆ ರಾಜೀವ ಗಾಂಧಿ ಆವಾಸ್ ಯೋಜನೆಯಡಿ ಜಿ+3 ಅಂತಾ ಮನೆಗಳನ್ನು ಕಟ್ಟಿಸಿರುತ್ತಾರೆ, ಆದರೆ 150 ಕುಟುಂಬದ ಬದಲಾಗಿ ಉತ್ತರ ಕ್ಷೇತ್ರದ ಶಾಸಕರು 90 ಮನೆಗಳನ್ನು ಮಾತ್ರ ನೀಡುವುದಾಗಿ ಫಲಾನುಭವಿಗಳ ಯಾದಿ ಮೇಲೆ ರುಜು ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

loading...