ಮಹಾದಾಯಿ ನದಿ ಸಮಸ್ಯೆ ಮಹತ್ವದ್ದಾಗಿದೆ: ಉಪೇಂದ್ರ

0
37
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:11 ಕಾವೇರಿ ನದಿಗಿಂತ ಉತ್ತರ ಕರ್ನಾಟಕದಲ್ಲಿರುವ ಮಹಾದಾಯಿ ನದಿಯ ಸಮಸ್ಯೆ ಮಹತ್ವದಾಗಿದೆ ಎಂದು ಪ್ರಜಾಕೀಯ ಪಕ್ಷ ಸಂಸ್ಥಾಪಕ, ಚಲನಚಿತ್ರ ನಟ ಉಪೇಂದ್ರ ಹೇಳಿದರು.
ಅವರು ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಕರ್ನಾಟಕ ರಾಜ್ಯದ ಜೀವಜಲಗಳಾದ ಕಾವೇರಿ ಹಾಗೂ ಮಹದಾಯಿ ನದಿ ನೀರಿನ ಸಮಸ್ಯೆಯ ಬಹಳ ಮುಖ್ಯವಾಗಿದೆ. ಇಸ್ರೇಲ್‍ನಂಥ ದೇಶದಲ್ಲಿ ಮರಳುಗಾಡು ಪ್ರದೇಶ ನೀರಿನ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ ಅಂಥವರು 84 ಪ್ರತಿಶ ಕೃಷಿಗಾಗಿ ಬಿಡುಗಡೆ ಮಾಡಿದ್ದಾರೆ ಎಂದರೆ ನಮ್ಮ ದೇಶದಲ್ಲಿ ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ಮಹದಾಯಿ ಸಮಸ್ಯೆಯನ್ನು ಇತ್ಯರ್ಥಗೊಳ್ಳಿಸಲು ಖಂಡಿತಾ ಸಾಧ್ಯವಿದೆ. ಸಮಸ್ಯೆ ಪರಿಹಾರ ಮಾಡುವಲ್ಲಿ ಯಾರು ಮುಂದೆ ಬರುತ್ತಿಲ್ಲ. ಜನಾರ್ಥನ ನಾಯಕರು ನಮ್ಮ ಪಕ್ಷಕ್ಕೆ ಬಂಬಲ ಸೂಚಿಸಿದರೇ ಪ್ರಾಮಾಣಿಕವಾಗಿ ಮಹದಾಯಿ ನದಿ ನೀರಿನ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕದಲ್ಲಿ ಈಗಾಗಲೇ ಜನರು ನಾಯಕರೆಂದು ಒಪ್ಪಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನಾಯಕರೆಂದು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ನಾನು ಭೀಕ್ಷೆ ಬೇಡುತ್ತಿಲ್ಲ. ನಾನೊಬ್ಬ ಪ್ರಜೆ ಎಂದು ನನ್ನ ಕರ್ತವ್ಯ ನಾನ್ನು ಮಾಡುತ್ತಿದ್ದೇನೆ. ಪಕ್ಷ ನಾನು ಮಾಡಿದ್ದೇನೆ ಎಂದುಕೊಳ್ಳಬೇಡಿ ಜನರಿಗೆ ಬೇಕು ಎಂದರೆ ಬನ್ನಿ ಇಲ್ಲಾ ಈರುವ ವ್ಯವಸ್ಥೆಯಲ್ಲಿ ಸರಿಇದೆ ಎಂದರೆ ಬೇಜಾರಿಲ್ಲ. ನಾನು ಸ್ಪರ್ಧೆಮಾಡಲು ಬಂದಿಲ್ಲ. ನಿಮಗೆ ಇಷ್ಟವಿದ್ದರೇ ಬನ್ನಿ ಎಂದು ಖಡಕ್ಕಾಗಿ ಹೇಳಿದರು.

loading...