ಮಹಿಳಾ ಸಬಲೀಕರಣದ ಮೂಲ ಆಶಯ ಈಡೇರಲಿ: ಶಶಿಕಲಾ ಜೊಲ್ಲೆ

0
30
loading...

ಚಿಕ್ಕೋಡಿ : 20 ನೇ ಶತಮಾನದಲ್ಲಿ ಆರ್ಥಿಕತೆ, ಅಧಿಕಾರದ ಸ್ವಾಧೀನ ಪಡಿಸಿಕೊಳ್ಳುವುದೇ ಮಹಿಳಾ ಸಬಲೀಕರಣದ ಗುರಿಯಾಗಿದ್ದು, ಮೂಲಭೂತ ತಿಳುವಳಿಕೆಗಳಾದ ಕಾನೂನು, ಸರ್ಕಾರಿ ಯೋಜನೆಗಳ ಅನುಕೂಲU ಇತ್ಯಾದಿಗಳ ಬಗೆಗೆ ಅರಿವು ಮೂಡಿಸಿದಾಗಲೇ ಮಾತ್ರ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ತಾಲೂಕಿನ ಎಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ 6 ನೇ ವರ್ಷದ ಪ್ರೇರಣಾ ಉತ್ಸವದ ಅಂಗವಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತ, ನಾವೆಲ್ಲರೂ ಒಂದೇ ಜಾತಿ, ಒಂದೇ ಕುಲ, ನಾವು ಮಹಿಳೆಯರು ಪುರುಷರಿಗಿಂತ ಮಹಿಳೆಯರು ಯಾವುದೇ ಕೆಲಸದಲ್ಲಿ ಕಡಿಮೆಯಿಲ್ಲ. ಸಮಾಜದ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಮಾನರು. ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇದ್ದೇ ಇರುತ್ತಾಳೆ ಎಂದರು. ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು ಮಹಿಳೆಯರಿಗೆ ಗೌರವಸ್ಥಾನವನ್ನು ಹಾಗೂ ಸಂರಕ್ಷಣೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಂತರ್‌ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಜಾನಪದ ಗೀತೆಗಳ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಉಜ್ವಲಕುಮಾರ ಗಚ್ಚಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿ ಹಾಗೂ ಜಾನಪದ ಸೊಗಡಿನ ಅರಿವನ್ನು ಮೂಡಿಸುವ ಉದ್ದೇಶಕ್ಕಾಗಿ ಜಾನಪದ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸುಮಾರು ವಿದ್ಯಾರ್ಥಿಗಳು ತಮ್ಮಲ್ಲಿರುವ ಗ್ರಾಮೀಣ ಜಾನಪದ ಕಲೆಗಳ ಗಾಯನ ಧಾಟಿಯನ್ನು ಪ್ರದರ್ಶಿಸಿಸಲು ಇದೊಂದು ಅದ್ಭುತ ವೇದಿಕೆಯಾಗಲಿದೆ ಎಂದು ಹೇಳಿದರು.

.ಈ ಸಂದರ್ಭದಲ್ಲಿ ಸಹಕಾರ ರತ್ನ ಅಣ್ಣಾಸಾಹೇಬ ಜೊಲ್ಲೆ, ಬಸವಜ್ಯೋತಿ ಯುತ್‌ ಫೌಂಡೇಶನ್‌ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಜ್ಯೋತಿ ಸೋಸೈಟಿಯ ನಿರ್ದೇಶಕರಾದ ಕಲ್ಲಪ್ಪಾ ಜಾಧವ, ದಿನಕರ ಪೇಟಕರ, ಬಾಳಕೃಷ್ಣ ಬಾಕಳೆ, ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಚಾಲಕರಾದ ಮಹಾದೇವಿ ಡೋಂಗರೆ, ಮಹಾದೇವಿ ಹುದ್ದಾರ, ಎನ್‌,ಎಮ್‌. ಮುಲ್ತಾಣಿ, ಜಿ.ಎನ್‌. ಮಾಣಗಾವಿ, ವಿಮಲಾ ಮಸ್ತಿಮಳಿ, ಎಸ್‌.ಸಿ. ಕಾಂಬಳೆ, ಎಸ್‌.ವಾಯ್‌. ತಳಕೇರಿ, ವಿಜಯ ರಾವುತ, ನಿರ್ದೇಶಕ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...