ಮಹಿಳೆಯರು ಸಾಧನೆಗೆ ಮುಂದಾಗಲಿ:ನೀಲಮಣಿ

0
26
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಪುರುಷ ದೈಹಿಕವಾಗಿ ಶಕ್ತಿ ಶಾಲಿಯಾದರೆ ಮಹಿಳೆ ಮಾನಸಿಕವಾಗಿ ಶಕ್ತಿಶಾಲಿ ಆಗಲಿ. ಆದ್ದರಿಂದ ಮಹಿಳೆಯನ್ನು ತ್ಯಾಗದ ಸಂಕೇತಕ್ಕೆ ಸೀಮಿತಗೊಳಿಸಲಾಗುತ್ತಿದೆ.ಇದೇ ವೇಳೆ ಮಹಿಳೆಯರ ಮುಗ್ದತೆಕೂಡ ಉನ್ನತಿಗೆ ತೊಡಕಾಗುತ್ತಿದ್ದು, ಇವೆಲ್ಲವನ್ನು ಅರಿತುಕೊಂಡು ಮಹಿಳೆಯರು ಸಾಧನೆಗೆ ಮುಂದಾಗಬೇಕು ಎಂದು ಪೋಲಿಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಹೇಳಿದರು.
ಅವರು ನಗರದ ಸಕ್ರ್ಯೂಟ್ ಹೌಸದಲ್ಲಿ ನಾರಿಶಕ್ತಿ ವುಮೇನ್ ವೆಲಪೇರ್ ಚಾರಿಟೆಬಲ್ ಟ್ರಸ್ಟ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾನತೆಗಾಗಿ ಮಹಿಳೆಯು ಶತಮಾನದಿಂದ ಹೋರಾಟ ನಡೆಸಿದ ಪರಿಣಾಮವಾಗಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತಢ ಸಾಧನೆ ಸಾದ್ಯವಾಗಿದೆ ಎಂದರು.
ಎಲ್ಲ ರಂಗಗಳಲ್ಲೂ ಅತ್ಯುನ್ನತ ಸಾಧನೆಗೈದ ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ತುಡಿತ ಕೂಡ ಇದೆ. ಮಹಿಳೆ ತ್ಯಾಗ ಮಾಡುವುದು ಅಂದರೆ ತನ್ನನ್ನು ತಾನು ಸುಟ್ಟುಕೊಳ್ಳುವುದು ಎಂದರ್ಥವಲ್ಲ, ಇನ್ನೊಬ್ಬರನ್ನು ಬೆಳೆಸುತ್ತಾ ತಾನು ಬೆಳೆಯುವುದಾಗಿದೆ. ಮಹಿಳೆಯರಿಗೆ ನಿತ್ಯ ಸವಾಲುಗಳು ಇದ್ದೆ ಇರುತ್ತವೆ. ಸಮಸ್ಯೆಗಳನ್ನು ಎದುರಿಸುವ ಕಲೆ ಹಾಗೂ ಛಾತಿಯನ್ನು ಬೆಳೆಸಿಕೊಂಡು ಮುನ್ನುಗ್ಗಿದಾಗ ಮಾತ್ರಯಶಸ್ಸು ಗಳಿಸುವುದು ಸಾದ್ಯವಾಗುತ್ತದೆ ಎಂದು ಹೇಳಿದರು.
ದೌರ್ಜನ್ಯಎಂಬುದಕ್ಕೆ ಹಲವಾರು ಆಯಾಮಗಳಿವೆ. ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ ದೌರ್ಜನ್ಯಗಳಿರುತ್ತವೆ. ಇವೆಲ್ಲವುಗಳನ್ನು ಮೆಟ್ಟಿ ನಿಂತು ಸ್ವಾವಲಂಬಿ ಬದುಕು ನಡೆಸಬೇಕಾದರೆ ಶಿಕ್ಷಣದ ಅಗತ್ಯವಿರುತ್ತದೆ. ಆ ನಿಟ್ಟಿನಲ್ಲಿ ಮಹಿಳೆಯರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಹಿಳೆ ಮತ್ತು ಪುರುಷರು ಪರಸ್ಪರ ಗೌರವಿಸುವ ಸಮಾನತೆ ಮೊದಲು ಬರಬೇಕು ಅಂದಾಗ ಮಾತ್ರ ಮಹಿಳಾ ಸಬಲೀಕರಣ ಸಾಧಿಸಬಹುದು ಎಂದು ನೀಲಮಣಿ ರಾಜು ತಿಳಿಸಿದರು.
ನಾರಿಶಕ್ತಿನ ವುಮೇನ ವೆಲಪೇರ ಚಾರಿಟೆಬಲ್ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷೆ ಸಫೀನಾ ಜೊಸೇಫ, ನಿರ್ದೇಶಕರಾದ ಅಂಥೋನಿ ಜೋಸೆಫ, ಪಿಟರ್ ಲೊಬೊ, ಕರುಣಾಕರ ರೆಡ್ಡಿ, ಸುಜಾತಾ ಜಾತಾರ, ಶಮೀಮ ನಾಲಬಂದ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

loading...