ಮಾತೃಪೂರ್ಣ ಯೋಜನೆಯನ್ನು ತಾಲೂಕಾಧಿಕಾರಿಗಳು ದುರ್ಬಳಕೆ ಮಾಡುತ್ತಿದ್ದಾರೆ: ಸದಸ್ಯರ ಆರೋಪ

0
28
loading...

 

ಕನ್ನಡಮ್ಮ ಸುದ್ದಿ
ಬೆಳಗಾವಿ:28 ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಇಲ್ಲ, ಬಾಣಂತಿಯರೂ ಬರುವುದಿಲ್ಲ ಮಾತೃಪೂರ್ಣ ಯೋಜನೆಯಲ್ಲಿ ತಾಲೂಕಾಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಾಪಂ ಸದಸ್ಯರು ಆರೋಪಿಸಿದರು.
ಬುಧವಾರ ತಾಲೂಕಾ ಪಂಚಾಯತಿ ಸಭಾಂಗಣದ ಸಾಮಾನ್ಯ ಸಭೆಯಲ್ಲಿ ತಾಲೂಕಾಧಿಕಾರಿಗಳ ನಡತೆಯ ಬಗ್ಗೆ ಅಸಮಾಧಾನ ವ್ಯಕ್ತಡಿಸಿದರು. ಎಲ್ಲ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಬರುವುದು ಅಪರೂಪವಾಗಿದೆ. ಅಲ್ಲಿ ಬಾಣಂತುಯರು ಬರುವುದಿಲ್ಲ. ಅಂಥ ಕಡೆಗಳಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿ ಮಾತೃಪೂರ್ಣ ಯೋಜನೆಯನ್ನು ತಾಲೂಕಾಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಾತೃಪೂರ್ಣ ಯೋಜನೆಯಲ್ಲಿ ಬರುವ ಆಹಾರ ಸಾಮಗ್ರಿಗಳನ್ನು ತಾಲೂಕಾಧಿಕಾರಿಗಳು ಮಾರುಕಟ್ಟೆ, ರೇಷನ್ ಅಂಗಡಿಗಳಲ್ಲಿ‌ ಮಾರಾಟ ಮಾಡುತ್ತಿದ್ದಾರೆ‌. ಮಕ್ಕಳು ಇರದ ಅಂಗನವಾಡಿಗಳಿಗೆ ಸಿಬ್ಬಂದಿಗಳ ನೇಮಕವಾದರು ಏಕೆ ಮಾಡುತ್ತಿರಿ ಎಂದು ಪ್ರಶ್ನಿದ ಸದಸ್ಯರು ಕೂಡಲೇ ಅಂಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಕ್ಕಳು ಅಂಗನವಾಡಿಗೆ ಬಾರದಿದ್ದರೂ ಅವರ ಹೆಸರಿನಲ್ಲಿ ಲೂಟಿ‌ಹೊಡೆಯುತ್ತಿದ್ದಾರೆ.ಈ ಹಿಂದೆ ಇದ್ದ ಅಧಿಕಾರಿಗಳ ಮೇಲೆ ಕ್ರಮಕೈಗೊಂಡು ತಪ್ಪಿತಸ್ಥತ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಅಂಗನವಾಡಿ ಆಹಾರ ಸಂಗ್ರಹಣ ಸ್ಥಳಗಲ್ಲಿ ಜಿಪಿಎಸ್ ಅಳವಡಿಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಉಪಾಧ್ಯಕ್ಷ ಮಾರುತಿ ಸನದಿ, ತಾಪಂ ಅಧಿಕಾರಿ ಎ.ಎಸ್‌.ಹಲಸುಡೆ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...