ಶಾಸಕ‌ ಸತೀಶ ಜಾರಕಿಹೊಳಿ‌ ಮೇಲೆ ಕೈ ಪಕ್ಷ ಕ್ರಮ ಕೈಗೊಳ್ಳಬೇಕು : ಮುನವಳ್ಳಿ

0
24
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:6 ಸ್ಮಶಾನದಲ್ಲಿ ಬಾಬಾಸಾಹೇಬ ಅಂಬೇಡ್ಕರ ಅವರ ಭಾವ ಚಿತ್ರವಿಟ್ಟು ಮೂಢ ನಂಬಿಕೆ ಹೆಸರಿನಲ್ಲಿ ಸಿಹಿ ಊಟ ಮಾಡಿ ದಲಿತರಿಗೆ ನೋವು ಉಂಟು‌‌ಮಾಡುತ್ತಿರುವ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರ ಮೇಲೆ ಕಾಂಗ್ರೆಸ್ ಪಕ್ಷ ಕ್ರಮ ಜರುಗಿಸದಿದ್ದರೆ ದಲಿತ ಸಮಾಜದ ಜನರು ಸತೀಶ ಜಾರಕಿಹೊಳಿ ಅವರಿಗೆ ದಿಕ್ಕರಿಸಿ ಪಾಠ ಕಲಿಸಬೇಕೆಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ‌ ಮುನವಳ್ಳಿ ಹೇಳಿದರು.
ಅವರು ಬುಧವಾರ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಉತ್ತರ ಕರ್ನಾಟಕ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ೬೧ನೇ ಮಹಾಪರಿನಿರ್ವಣ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬಾಬಾಸಾಹೇಬ ಅವರ ಮಹಾಪರಿನಿರ್ವಾಣ ದಿನವನ್ನು ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರು ಸ್ಮಶಾನದಲ್ಲಿ ಮೂಢ ನಂಬಿಕೆಯ ಹೆಸರಿನಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರವಿಟ್ಟು ಪೂಜೆ ಸಲ್ಲಿಸಿ ಸಿಹಿ ಊಟ ಮಾಡುತ್ತಿರುವುದು ದಲಿತ ಸಮಾಜಕ್ಕೆ ದುಃಖ ಸಂಗತಿಯಾಗಿದೆ ಎಂದರು.
ಇತ್ತೀಚಿನ ದಿನದಲ್ಲಿ ದಲಿತರನ್ನು ಒಗ್ಗೂಡಿಸುವ ಸಂಘಟನೆಗಳ ಸಂಖ್ಯೆ ಕೊರತೆಯಿದೆ. ಬಲಾಢ್ಯರು ದಲಿತರನ್ನು ಒಂದೇಡೆ ಕೂಡಲು ಬಿಡುತ್ತಿಲ್ಲ. ಆದ್ದರಿಂದ ದಲಿತರು ಸಂಘಟನೆಗಳು ಒಂದಾಗಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ದಲಿತರನ್ನು ರಾಜಕಾರಣಿಗಳು ನಮ್ಮನ್ನು ಒಡೆದು ಆಳುತ್ತಿವೆ. ಎಡ ಬಲ ಮಾದಿಗ ಛಲವಾದಿ ಸಮುದಾಯಗಳು ಸಹೋದರರು ಇದ್ದಹಾಗೆ. ಸ್ವಂತ ವಿಚಾರ ಹಂಚಿಕೊಳ್ಳಲು ಎಡ ಬಲ ಎಂಬ ತಾರತಮ್ಯದ ಹೆಸರಿನಲ್ಲಿ ರಾಜಕಾರಣಿಳಿಗೆ ತಕ್ಕಪಾಠ ಕಲಿಸೋಣ ಎಂದರು.
ಬಾಬಾಸಾಹೇಬ ಅಂಬೇಡ್ಕರ್ ಅವರ ಕಾಲದಲ್ಲಿ ಆಧುನಿಕ ತಂತ್ರಜ್ಞಾನ ಇರಲಿಲ್ಲ. ಒಂದು ವೇಳೆ ಇದಿದ್ದರೇ ನಮಗೆ ಬೇಕಾದನ್ನು ನೀಡುತ್ತಿದ್ದರು. ಆದರೆ ನಮಗೆ ಹೋರಾಟ ಮಾಡಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಪ್ರೋತ್ಸಾಹ ತುಂಬಿದ್ದಾರೆ ಎಂದು ಅವರು ಹೇಳಿದರು.
ದಲಿತರು, ಅಸ್ಪುರುಷರು ಒಂದೇ ಹೋರಾಟದ ಮೂಲಕ ನಮ್ಮಬೇಡಿಕೆಯನ್ನು ಈಡೇರಿಸಿಕೊಳ್ಳಬೇಕೆಂದರು.
ರಾಜಕೀಯ ಪಕ್ಷಗಳಿಗೆ ಭಯ ಹುಟ್ಟಿಸಲಿಲ್ಲ ಅಂದ್ರೆ ತುಳಿಯುತ್ತಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದಲಿತರು ನೋಟಾ ಬಟನ್ ಒತ್ತುವ ಮೂಲಕ ನಮ್ಮನ್ನು ಕಡೆಗಣಿಸಿದವರಿಗೆ ಪಾಠ ಕಲಿಸಬೇಕಿದೆ ನಾವು ಮತಹಾಕುವ ಯಂತ್ರವಾಗಾರದು ನಮ್ಮ ಬೇಡಿಕೆಯನ್ನು ಈಡೇರಿಸುವ ಶಕ್ತಿಯಾಗಬೇಕೆಂದರು ಕರೆ ನೀಡಿದರು. ನಮ್ಮಲ್ಲಿರುವ ಭಿನ್ನಾಪ್ರಾಯಗಳನ್ನು ತೊಡೆದು ಹಾಕಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಲ್ಲೇಶ ಚೌಗಲೆ, ಬಸವನಾಗದೇವರು, ವಿಮಲಕೀರ್ತಿ ಪಂತೇಜ, ಆಗದಮ್ಮ ಶ್ರೀಗಳು, ಸುಧಾಕರ ಜೋಗಳೇಕರ, ಲಕ್ಷ್ಮೀ‌ಷಣ್ಮುಕ ಸಂತೋಷ ತಳವಾರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...