ಯುವ ಜನತೆ ರಕ್ತ ದಾನಕ್ಕೆ ಮುಂದಾಗುವಂತೆ ಕರೆ

0
18
loading...

ಹಾವೇರಿ: ಡಿ.08: ವಿಜ್ಞಾನ, ತಂತ್ರಜ್ಞಾನದ ಅವಿಷ್ಕಾರ ಮಾನವನ ಅಗತ್ಯ ಅವಶ್ಯಕತೆÉ ಪೊರೈಸುತ್ತಿದೆ, ಆದರೆ ಜೀವ ರಕ್ಷಕ ರಕ್ತವನ್ನು ಸಿದ್ದಪಡಿಸಲು ಸಾಧ್ಯವಾಗಿಲ್ಲ. ಈ ದಿಶೆಯಲ್ಲಿ ಯುವ ಜನತೆ ರಕ್ತದಾನ ಮುಂದಾಗಬೇಕು ಎಂದು ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ಅಧಿಕಾರಿಯಾದ ಬಸವರಾಜ ತಳವಾರ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಜಿ.ಪಂ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ, ಜಿಲ್ಲೆಯ ಎನ್.ಎಸ್.ಎಸ್, ಎನ್.ಸಿ.ಸಿ.ರೆಡ್ ರಿಬ್ಬನ್ ಕಾಲೇಜು, ಹೆಚ್.ಎಫ್.ಸಿ ಬ್ಯಾಂಕ್, ಜೆ.ಹೆಚ್ ಕಾಲೇಜ್ ಹಾಗೂ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮನುಷ್ಯ ತನಗೆ ಅವಶ್ಯಕವಾದ ಎಲ್ಲ ಬಗೆಯ ವಸ್ತುಗಳನ್ನು ಹಣಕೊಟ್ಟು ಖರೀದಿಸಬಹುದು, ಆದರೆ ಹಣ ಇದೇ ಎಂದು ರಕ್ತ ಖರೀದಿಸಲು ಸಾಧ್ಯವಿಲ್ಲ. ಈ ದಿಶೆಯಲ್ಲಿ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ ಎಂದರು.
ಮನುಷ್ಯ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತಿರುತ್ತದೆ, ಆದ್ದರಿಂದ 18ರಿಂದ 60 ವರ್ಷದೊಳಗಿನ ಮಹಿಳೆ ಹಾಗೂ ಪುರುಷರು ರಕ್ತದಾನ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗಿ ಆರೋಗ್ಯಯುತವಾಗಿರಲು ರಕ್ತದಾನ ಮಾಡುವುದು ಅತೀ ಪ್ರಾಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಮಾತನಾಡಿ, ಯುವಕರು ಹೆಚ್ಚು ರಕ್ತದಾನ ಮಾಡಲು ಮುಂದಾಗಬೇಕು. ಅಪಘಾತ, ಇತರೆ ಸಂದರ್ಭದಲ್ಲಿ ರಕ್ತಸ್ರಾವವಾಗಿ ರಕ್ತದ ಪ್ರಮಾಣ ಕಡಿಮೆಯಾಗಿ ಸಾವು ಬದುಕಿನ ಸ್ಥಿತಿಯಲ್ಲಿರುವರನ್ನು ಬದುಕಿಸಲು ಸಹಾಯವಾಗುತ್ತದೆ ಎಂದರು.
ಯುವಕರು ರಕ್ತದಾನ ಮಾಡಲು ಶಾಲಾ ಕಾಲೇಜುಗಳಲ್ಲಿ ರಕ್ತದಾನದÀ ಕುರಿತು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ಹೆಚ್ಚು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಆಪರೇಷನಲ್ ಮ್ಯಾನೇಜರ ಪ್ರಕಾಶ ಪಾಟೀಲ, ಜೆ,ಹೆಚ್ ಕಾಲೇಜು ಉಪನ್ಯಾಸಕ ನಾಗರಾಜ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಭಾರಿ ರಕ್ತದಾನ ಮಾಡಿದ ತಾನಾಜಿ ಘೋರ್ಖಡೆ ಹಾಗೂ ತಿಪ್ಪಣ ಆಲದಕಟ್ಟಿ ಅವರನ್ನು ಸನ್ಮಾನಿಸಿದರು.

loading...