ಯೋಗದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ಪ್ರಭುಚನ್ನಬಸವ ಸ್ವಾಮೀಜಿ 

0
16
loading...

ಅಥಣಿ 25: ನಿತ್ಯ ಯೋಗ ಮಾಡುವದರಿಂದ, ಶರೀರದ ಕಲ್ಮಶಗಳನ್ನು ಕಳೆದುಕೊಂಡು, ದೈಹಿಕವಾಗಿ ಮಾನಸಿಕವಾಗಿ ಸ್ವಾಸ್ಥವಿದ್ದು ಸ್ವಂತಕ್ಕೆ ನಿರೋಗಿಯಾಗಿರುವುದಲ್ಲದೆ, ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.ಸ್ಥಳೀಯ ಅಥಣಿ_ ವಿಜಯಪೂರ ರಸ್ತೆಯಲ್ಲಿ ನಿರ್ಮಾಣಗೊಂಡ, ಮೋಟಗಿಮಠದ ನೂತನ ಅನುಭವ ಮಂಟಪ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡಿರುವ ಏಳು ದಿನಗಳ ‘‘ಯೋಗ ಶಿಬಿರ ” ದ ಉದ್ಘಾಟನೆಯನ್ನು ನೆರವೆರಿಸಿ ಮೇಲಿನಂತೆ ನುಡಿಯುತ್ತ, ಜಗತ್ತಿಗೆ ಭಾರತೀಯರ ಕೊಡುಗೆ ಅಂದರೆ ‘‘ಯೋಗ”, ಈ ಯೋಗವನ್ನು ಕಲಿಯಲು ಇಂದು ಜಗತ್ತೆ ಭಾರತದತ್ತ ಮುಖ ಮಾಡಿ ನಿಂತಿದೆ. ನಾವೆಲ್ಲ ಸ್ವಸ್ಥ ಇದ್ದಲ್ಲಿ, ಸುಂದರ ಬದುಕು ರೂಪಿಸಿಕೊಂಡು ಬಾಬಾ ರಾಮದೇವರ ಆಶಯದಂತೆ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದರು.ಮುದಗಲ್‌ ಮಹಾಂತ ಸ್ವಾಮೀಜಿಯವರು ಉಪಸ್ಥಿತರಿದ್ದು, ಶ್ರೀಮಠದ ಅನುಭವ ಮಂಟಪ ಲೋಕಾರ್ಪಣೆ ವಿಶಿಷ್ಠವಾಗಿ ನೆರವೇರಿಸುವ ನಿಟ್ಟಿನಲ್ಲಿ ಯೋಗ ಹಮ್ಮಿಕೊಂಡಿರುವುದು ಸ್ತುತ್ಯಾರ್ಹವೆಂದರು. ಯೋಗ ಶಿಕ್ಷಕರಾದ ಎ.ಬಿ. ಪಾಟೀಲ, ಎಸ್‌ ಕೆ ಹೊಳೆಪ್ಪನವರ ಯೋಗ ಹೇಳಿಕೊಟ್ಟರು. ಯೋಗ ಶಿಕ್ಷಕ ತರಬೇತಿ ಪಡೆದ ಶಿವಪುತ್ರ ಯಾದವಾಡ, ರಾಜು ಇನಾಮದಾರ,ವಿಲಾಸ ಭಾಟೆ, ಶಿವಾನಂದ ಗೋಟಖಿಂಡಿ, ಡಾ.ಜಗದೀಶ ಮಿರಜಕರ, ರೋಹಿಣಿ ಯಾದವಾಡ, ಸುರೇಖಾ ತಾಂಬಟ, ಉಜ್ವಲಾ ಹಾಗೂ ಮುರುಗೆಪ್ಪ ಮಡಿವಾಳ, ಮಲ್ಲಿಕಾರ್ಜುನ ಸಂಕ, ನಾಗರಾಜ ದಾಸರ ಉಪಸ್ಥಿತರಿದ್ದರು. ಶಿವಾನಂದ ಬುರ್ಲಿ ಸ್ವಾಗತಿಸಿದರು.

loading...