ರಷ್ಯಾ :ಸೂಪರ್ ಮಾರ್ಕೆಟ್‍ನಲ್ಲಿ ಬಾಂಬ್ ಸ್ಫೋಟ, ಹಲವರಿಗೆ ಗಾಯ

0
26
loading...

 

ಮಾಸ್ಕೋ: ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್‍ನ ಜನಸಂದಣಿಯ ಸೂಪರ್ಮಾರ್ಕೆಟ್‍ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಉಗ್ರರಿಂದ ಬಾಂಬ್ ದಾಳಿ ನಡೆಯುವ ಆತಂಕದ ಹಿನ್ನೆಲೆಯಲ್ಲಿ ನಡೆದ ಈ ಘಟನೆಯಿಂದ ನಾಗರಿಕರು ಮತ್ತಷ್ಟು ಭಯಭೀತಗೊಂಡಿದ್ದಾರೆ.

ಸೇಂಟ್ ಪೀಟರ್ಸ್‍ಬರ್ಗ್‍ನ ಪೆರೆಕ್ರೆಸ್ಟೊಕ್ ಸೂಪರ್ಮಾರ್ಕೆಟ್‍ನಲ್ಲಿ ನಾಡ ಬಾಂಬ್ ಸ್ಫೋಟಗೊಂಡು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತನಿಖಾ ಸಮಿತಿ ವಕ್ತಾರೆ ಸ್ವೆಟ್ಲಾನಾ ಪಟ್ರೆಂಕೋ ಹೇಳಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಾಡಬಾಂಬ್ ಅತ್ಯಂತ ಪ್ರಬಲವಾಗಿದ್ದು, 200 ಗ್ರಾಂ ಟಿಎನ್‍ಟಿಗಳಿಗೆ ಸಮ ಎಂದು ಹೇಳಲಾಗಿದೆ. ಈ ಘಟನೆ ಬಗ್ಗೆ ತನಿಖೆ ತೀವ್ರಗೊಂಡಿದ್ದು, ರಷ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ

loading...