ರಸ್ತೆ ಅಗಲೀಕರಣದ ಪರಿಹಾರ ವಿತರಿಸಲು ಮನವಿ

0
24
loading...


ಕನ್ನಡಮ್ಮ ಸುದ್ದಿ
ಬೆಳಗಾವಿ : ಸಾಂಬ್ರಾ ವಿಮಾನ ನಿಲ್ದಾಣದಿಂದ ಸುವರ್ಣ ಸೌಧಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರದಿಂದ ಜಮೀನು ಕಳೆದುಕೊಳ್ಳುವ ರೈತರಿಗೆ ಮೊದಲು ಪರಿಹಾರ ವಿತರಿಸಿ ರಸ್ತೆ ಕಾಮಗಾರಿಯನ್ನು ಆರಂಭಿಸುವಂತೆ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಮಂಗಳವಾರ ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.
ಶಿಂದೊಳ್ಳಿ ಕ್ರಾಸ್‍ದಿಂದ ಮಾಸ್ತಮರಡಿ, ಬಸರಿಕಟ್ಟಿ ಮಾರ್ಗವಾಗಿ ಸುವರ್ಣ ಸೌಧದ ಪಕ್ಕದಿಂದ ಹಲಗಾ ಗ್ರಾಮದ ವರೆಗೆ ನಿರ್ಮಾಣವಾಗುತ್ತಿರುವ ರಸ್ತೆಯ ಅಗಲೀಕರಣದ ಮುಂಚೆ ಸರ್ವೇ ಕಾರ್ಯವನ್ನು ಕೈಗೊಂಡು ಜಮೀನು ಕಳೆದುಕೊಳ್ಳುವ ರೈತರಿಗೆ ಪರಿಹಾರ ವಿತರಿಸಿ ಕಾಮಗಾರಿ ಆರಂಭಿಸವಂತೆ ಆಗ್ರಹಿಸಿದರು.

loading...