ರಸ್ತೆ ಅತೀಕ್ರಮಣ ನೂರಾರು ಅಂಗಡಿಕಾರರು ಬೀದಿಪಾಲು

0
36
loading...

ಕಾಗವಾಡ 12: ಕಾಗವಾಡ-ಮಿರ ಮಾರ್ಗದ ರಾಜ್ಯ ಹೆದ್ದಾರಿ ಮೇಲಿನ ಕಾಗವಾಡದಲ್ಲಿಯ ರಸ್ತೆ ಎರಡು ಬದಿಗೆ ಕಳೆದ ಕೆಲ ವರ್ಷಗಳಿಂದ ಗ್ರಾಮದ ಅನೇಕ ನಿರುದ್ಯೊಗಿ ಯುವಕರು ಗೂಡಂಗಡಿ ಇಟ್ಟುಕೊಂಡು ಉಪಜೀವನ ಮಾಡಿತ್ತಿದ್ದರು. ಲೋಕೋಪಯೋಗಿ ಇಲಾಖೆ ಅಂಗಡಿಗಳನ್ನು ತೆರವುಗೊಳಿಸಲು ಆದೇಶಿಸಿದ್ದರಿಂದ ಸುಮಾರು 200 ಅಂಗಡಿಗಳು ಸ್ವಯಂಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ. ಇದರಿಂದ ನುರಾರು ಕುಟುಂಬಗಳು ಬೀದಿಪಾಲವಾಗಿವೆೆ.ಲಕಾಗವಾಡ ರಾಜ್ಯ ಹೆದ್ದಾರಿಯ ಎರಡೂ ಬದಿಗೆ ಗೂಡಂಗಡಿ ಇಟ್ಟುಕೊಂಡು ಅದರಲ್ಲಿ, ಹಣ್ಣು, ಸ್ಟೇಶನರಿ, ಚಿಕ್ಕ ಹೋಟೆಲ ಸಹ ಅನೇಕರು ಉದ್ಯೋಗ ಮಾಡುತ್ತಿದ್ದರು. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಗಲೀಕರಣ ಮಾಡುದಾಗಿ ಹೇಳಿಕೊಂಡು. ಅಂಗಡಿಗಳನ್ನು ತೆರವುಗೊಳಿಸಲು ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಾ ಬಂದಿದ್ದರು. ಕೊನೆಗೆ ದಿ.10ರಂದು ಕೊನೆಯ ಗಡವು ನೀಡಿದರು. ಅಷ್ಟರಲ್ಲಿ ಅಂಗಡಿಕಾರರು ಅನೇಕ ರಾಜಕೀಯ ಮುಖಂಡರು, ಅಧಿಕಾರಿ ಹತ್ತಿರ ಹೋಗಿ ಕಳೆದ ಕೆಲ ವರ್ಷಗಳಿಂದ ನಾವು ಇಲ್ಲಿಗೆ ಅಂಗಡಿ ಹಾಕಿ ನಮ್ಮ ಕುಟುಂಬಗಳು ಬಾಳುತ್ತಿದ್ದೇವೆ. ನಮಗೆ ಬೇರೆ ಸ್ಥಳ ನೀಡಿರಿ ಎಂದು ಕೇಳಿದರು. ಆದರೆ ಅವರ ನೆರವಿಗೆ ಯಾರು ಬಾರದೇ ತಮ್ಮ ಅಂಗಡಿಗಳನ್ನು ತಾವೇ ಕಿತ್ತು ಹಾಕುತ್ತಿದ್ದಾರೆ.ಬದುಕು ಬೀದಿಗೆ: ಲೋಕೋಪಯೋಗಿ ಇಲಾಖೆ ಆದೇಶದಿಂದ ನೂರಾರು ಕುಟುಂಬಗಳು ಬಿದಿಗೆ ಬಿದ್ದಂತಾಗಿದೆ. ಸರ್ಕಾರ ಇಂತಹ ಬಡ ಕುಟುಂಬದ ನೆರವಿಗೆ ಬಾರದೇ ಅನ್ಯಾಯ ಮಾಡುತ್ತಿದೆ. ರಸ್ತೆ ಬದಿ ಅಂಗಡಿಗಳು ಹಾಕುವಾಗ ಈ ಅಧಿಕಾರಿಗಳಿಗೆ ಗಮನಕ್ಕೆ ಬರಲ್ಲಿಲ್ಲವೇನು ಎಂದು ಭಾರತಿ ಜನಶಕ್ತಿ ಕಾಂಗ್ರೆಸ ಮತ್ತು ನಿವೃತ್ತ ಮುಖ್ಯೋಧ್ಯಾಪಕ ಮಹಾದೇವ ಉದಗಾಂವೆ ಆರೋಪಿಸಿದ್ದಾರೆ.ಗಾಯದ ಮೇಲೆ ಬರೆ: ಕಾಗವಾಡ ಗ್ರಾಮದಿಂದ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ರಸ್ತೆಯ ಮಧ್ಯದಿಂದ ಎರಡು ಬದಿಗೆ 50 ಅಡಿ ಅಂತರವಿರುತ್ತದೆ . ಆದರೆ ದಕ್ಷಿಣ ಭಾಗದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸ್ಥಳಯಿದೆ. ಸದರೀ ಇಲಾಖೆಯವರು 50 ಅಡಿ ಲೋಕೋಪಯೋಗಿ ಇಲಾಖೆಯವರ ಸ್ಥಳವನ್ನು ಬಿಡುವೊದೊಂದಿಗೆ ನಮ್ಮ ಬಳಿ ಇರುವ ಸ್ಥಳವನ್ನು ತೆರುವುಗೊಳಿಸಿರಿ ಎಂದು ಆದೇಶಿಸಿದ್ದರಿಂದ. ಅಂಗಡಿಕಾರರ ಗಾಯದ ಮೇಲೆ ಬರೆ ಎಳದಂತಾಗಿದೆ ಎಂದು ಅಂಡಿಕಾರರಾದ ಬಾಳಪ್ಪಾ ಧೊತರೆ, ಅರವಿಂದ ಮಾಳಿ, ಶರದ ಪಾಟೀಲ, ಸಂತೋಶ ಮುಜಾವರ, ಅನೀಲ ಕೋರೆ, ರಾವಸಾಬ ಪವಾರ, ಎಮ.ಎಸ ಭಟ್ಟ್‌, ಅಮೋಲ ಮಾನೆ ಮುಂತಾದವರು ಅಳಲು ತೋಡಿಕೊಂಡರು.

loading...