ರಸ್ತೆ ಅಪಘಾತ: ಇಬ್ಬರು ಸಾವು, ಓರ್ವ ಗಂಭೀರಗಾಯ

0
18
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಮೃತಹೊಂದಿ, ಓರ್ವನಿಗೆ ಗಂಭೀರವಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಘಟನೆ ಭಾನುವಾರ ತಡರಾತ್ರಿ ಜರುಗಿದೆ.
ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕನಕನಕೊಪ್ಪ ಗ್ರಾಮದ ಲಲಿತಾ ರಾಘವೇಂದ್ರ ಅರಕಚಾರಿ (28), ಗಣೇಶ ಅರಕಚಾರಿ (3) ಮೃತ ವ್ಯಕ್ತಿಗಳು. ರಾಘವೇಂದ್ರ ಅರಕಚಾರಿ (36) ಗಂಭೀರಗಾಯಾಳು. ಇವರು ಹಾಲಿ ಇಲ್ಲಿನ ಜ್ಯೋತಿ ನಗರದಲ್ಲಿ ವಾಸವಿದ್ದು, ಭಾನುವಾರ ಬೆಳಗಾವಿಯಿಂದ ಹಾವೇರಿಗೆ ಹೋಗುತ್ತಿದ್ದ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿ ಎಂ.ಕೆ ಹುಬ್ಬಳ್ಳಿ ಹತ್ತಿರ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ತಕ್ಷಣ ಜಿಲ್ಲಾಸ್ಪತ್ರೆಗೆ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ಚಾಲ್ತಿಯಲ್ಲಿದೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...