ರಾಜ್ಯ-ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳು

0
28
loading...

ಗದಗ: ಬಾಗಲಕೋಟಿ ಜಿಲ್ಲೆಯ ಸನಾಳದ ಜೈ ಹನುಮಾನ ಸಂಸ್ಕøತಿಕ ಸಂಘ ಎರ್ಪಡಿಸಿದ್ದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಲ್ಲಿ ಶ್ವೇತಾ ಬೆಳಗಟ್ಟಿ ಪ್ರಥಮಸ್ಥಾನ ಪಡೆದಿದ್ದಾರೆ ಕ್ರೀಡಾ ಪಟುವಿಗೆ ವೀರರಾಣಿ ಕಿತ್ತೂರ ಚನ್ನಮ್ಮ 2017ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತರ್ ರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಪ್ರೇಮಾ ಹುಚ್ಚಣ್ಣವರ ಸಾಧನೆಯನ್ನು ಪರಿಗಣಿಸಿ ಕರುನಾಡ ನಕ್ಷತ್ರ-2017 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ನುಡಿಸಿರಿ-2017ರ ಅಂಗವಾಗಿ ನಡೆಸಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆ ನುಡಿಸಿರಿ-2017ರ ಅಂಗವಾಗಿ ನಡೆಸಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಶಾಹಿದಾ ಬೇಗಂ ಬಳಿಗಾರ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸಾಧನೆ ಮಾಡಿರುವ ಕ್ರೀಡಾ ಪಟುಗಳು ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದು ಇವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ, ತರಬೇತುದಾರರಾದ ಶರಣಗೌಡ ಬೆಲೇರಿ, ರಮೇಶ ಜಿಡ್ಡಿಮನಿ ಅಭಿನಂದಿಸಿದ್ದಾರೆ.

loading...