ರಾಮದುರ್ಗಕ್ಕೆ 2 ಸಾವಿರ ಕೋಟಿಗೂ ಅಧಿಕ ಅನುದಾನ ಬಿಡುಗಡೆ: ಸಿಎಂ

0
33
loading...

 

ಕನ್ನಡಮ್ಮ ಸುದ್ಧಿ-ರಾಮದುರ್ಗ: ಸಾಲಾಪೂರ ಏತ ನೀರಾವರಿ ಮತ್ತು ವೀರಭದ್ರೇಶ್ವರ ಏತ ನೀರಾವರಿ ಯೋಜನೆಗಳು ಅಶೋಕ ಪಟ್ಟಣ ಅವರ ಶ್ರಮದಿಂದ ಜಾರಿಯಾಗಿವೆ. ಕಾಂಗ್ರೇಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ನೀರಾವರಿಗೆ ಹಾಗೂ ಕೆರೆಗಳಿಗೆ ನೀರು ತುಂಬಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದು ನಾಲ್ಕುವರೆ ವರ್ಷದಲ್ಲಿ ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಗೊಡಚಿ ಗ್ರಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ರಾಮದುರ್ಗ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜ್ಯಾತ್ಯಾತೀತ ರಾಜಕಾರಣಿಗಳು ಬಂದಾಗ ರಾಜ್ಯದ ಅಭಿವೃದ್ದಿ ಸಾದ್ಯ ಬಿಜೆಪಿ ಸರ್ಕಾರ ಅಧಿಕಾರ ಅವಧಿಯಲ್ಲಿ ರಾಮದುರ್ಗದಲ್ಲಿ 24/7 ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ, ನಮ್ಮ ಕಾಂಗ್ರೇಸ್ ಶಾಸಕರು ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಮೇಲೆ 24/7 ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಿಸಲು ರಾಜ್ಯದ 1 ಕೋಟಿ 2 ಲಕ್ಷ ಶಾಲಾ ಮಕ್ಕಳಿಗೆ ವಾರದ 7 ದಿನಗಳಲ್ಲಿ 5 ದಿನ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದೇವೆ.

ಕರ್ನಾಟಕ ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿಸಲು ಪ್ರತಿವರ್ಷ ಕಾಂಗ್ರೇಸ್ ಸರ್ಕಾರವು 3 ಲಕ್ಷ ಮನೆಗಳ ನಿರ್ಮಾಣ ಮಾಡುತ್ತಿದ್ದು, ನಾಲ್ಕುವರೆ ವರ್ಷದಲ್ಲಿ ಸುಮಾರು 13 ಲಕ್ಷ ಮನೆಗಳ ನಿರ್ಮಾಣ ಮಾಡಿದ್ದೇವೆ.ರಾಜ್ಯದ ಜನರಿಗೆ ಚುನಾವಣೆಯ ಕಾಲಕ್ಕೆ ನೀಡಿದ 165 ಭರವಸೆಗಳಲ್ಲಿ ಈಗ 155 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನು ಈಡೇರಿಸಲಾಗುವುದು ರಾಜ್ಯ ಬಿಜೆಪಿ ಮುಖಂಡರಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ, ಈಶ್ವರಪ್ಪ ಇವರಿಗೆ ರಾಜ್ಯದ ರೈತರ 42 ಸಾವಿರ ಕೋಟಿ ಸಾಲವನ್ನು ಕೇಂದ್ರದಲ್ಲಿ ಇರುವ ನಿಮ್ಮ ಪ್ರಧಾನ ಮಂತ್ರಿಯವರಿಗೆ ತಿಳಿಸಿ, ಸಾಲ ಮನ್ನಾ ಮಾಡುವಂತೆ ಹೇಳಿದರೆ, ಅವರು ನಿರ್ಲಕ್ಷ್ಯಭಾವನೆ ತೋರಿಸದಿದ್ದಾರೆ, ಕಾರಣ ರೈತರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ.
ರಾಜ್ಯದ ರೈತರ ಸಂಕಷ್ಠವನ್ನು ಅರಿತು ಜೂನ ತಿಂಗಳಲ್ಲಿ ರಾಜ್ಯದ 22,27,506 ರೈತರ 8,165 ಕೋಟಿ ಸಾಲವನ್ನು (50ಸಾವಿರ ರೂ.ಗಳಂತೆ) ಮನ್ನಾ ಮಾಡಿದೆನು ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರುಗಳು ಪರಿವರ್ತನಾ ರ್ಯಾಲಿ ಮಾಡುತ್ತಿದ್ದು, ಮೊದಲು ಅವರು ಪರಿವರ್ಥನೆಯಾಗಬೇಕಾಗಿದೆ. ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ರಾಜ್ಯದ ರೈತರು ಗೊಬ್ಬರ ಕೇಳಿದರೆ, ಅವರ ಮೇಲೆ ಗೋಲಿಬಾರ ಮಾಡಿಸಿದ ಬ್ರಷ್ಠ ಮುಖ್ಯಮಂತ್ರಿ, ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ನೆಪಕ್ಕೆ ಹಸಿರು ಟವಲ ಹಾಕಿ ನಾನು ಮಣ್ಣಿನ ಮಗ ಅಂತಾ ಹೇಳ್ತಾರೆ ಕೂಡಲ ಸಂಗಮದಲ್ಲಿ ಕಾಂಗ್ರೇಸ್ ಸಭೆ ನಡೆಸಿದಾಗ ನಾನು ಹೇಳಿದ್ದೆ ಪ್ರತಿ ವರ್ಷ ನೀರಾವರಿಗೆ 10 ಸಾವಿರ ಕೊಟಿ ಅನುದಾನ ಬಳುಸುತ್ತಿದ್ದು, ಈಗ ನಾಲ್ಕುವರೆ ವರ್ಷದಲ್ಲಿ 50 ಸಾವಿರ ಕೋಟಿ ಅನುದಾನ ಖರ್ಚು ಮಾಡಿದ್ದೇವೆ.

ಈಗಾಗಲೇ ಕಾಂಗ್ರೇಸ್ ಸರ್ಕಾರ ಪ್ರತಿ ವರ್ಷ ನೀರಾವರಿ 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ರಾಜ್ಯ ಸರ್ಕಾರದ ಬಗ್ಗೆ ಆಪಾದಿಸುತ್ತಿರುವ ಬಿಜೆಪಿ ಮುಖಂಡರ ಹಾಕಿಕೊಂಡ ಪರಿವರ್ತನಾ ರ್ಯಾಲಿಯಲ್ಲಿ ಖಾಲಿ ಕುರ್ಚಿಗಳು ಕಾಣುತ್ತಿವೆ. ಮುಂದಿನ ಭಾರಿ ಶಾಸಕರನ್ನು ಅಧಿಕ ಅಂತರದಿಂದ ಆಯ್ಕೆಮಾಡಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ವಿಧಾನ ಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ ಸ್ವಾಗತಿಸಿ ಪ್ರಾಸ್ತಾವಿಕವಾಗ ಮಾತನಾಡಿದರು. ಪುರಸಭೆಯ ಅಧ್ಯಕ್ಷ ರಾಜು ಮಾನೆ, ಜಿಪಂ ಸದಸ್ಯರಾದ ಜಹೂರ ಹಾಜಿ, ಕೃಷ್ಣಾ ಲಮಾಣಿ, ತಾಪಂ ಉಪಾಧ್ಯಕ್ಷೆ ರುಕ್ಮವ್ವಾ ಪೂಜೇರ,ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ ಬಂಡಿವಡ್ಡರ, ಸಿಇಓ ರಾಮಚಂದ್ರನ್ ಶಿದ್ದಲಿಂಗಪ್ಪ ಸಿಂಗಾರಿಗೊಪ್ಪ,ಪರಪ್ಪ ಜಂಗವಾಡ, ಪ್ರದೀಪ ಪಟ್ಟಣ, ಮಹಮ್ಮ ಶೇಫಿ ಬೆಣ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...