ರೈತರ ಹಿತಾಸಕ್ತಿಗಾಗಿ ಯೋಜನೆಗಳ ಜಾರಿ: ಶಾಸಕಿ ಶಶಿಕಲಾ ಜೊಲ್ಲೆ

0
16
loading...

ಚಿಕ್ಕೋಡಿ 07: ಅಭಿವೃದ್ಧಿ ದೃಷ್ಟಿಯಿಂದ ರೈತರನ್ನು ವಿಕಾಸದ ದಾರಿಯಲ್ಲಿ ಕೊಂಡೊಯ್ಯಲು ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ತಾಲೂಕಿನ ಮಾಣಕಾಪೂರ ಗ್ರಾಮದ ಎಸ್‌ಸಿ ಸಮುದಾಯದ ರೈತರಿಗಾಗಿ ಸುಮಾರು 40 ಲಕ್ಷ ಅನುದಾನದಲ್ಲಿ ಮಂಜೂರಾಗಿರುವ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನೀರಾವರಿ ಪೈಪಲೈನಗೆ ಹಾಗೂ ನಿರಂತರ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

2013 ರ ಚುನಾವಣೆಯಲ್ಲಿ ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿದ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಾನು ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದಲ್ಲಿರುವ ರೈತರಿಗೆ ಗಂಗಾ ಕಲ್ಯಾಣ ಯೋಜನೆ, ಸುಧಾರಿತ ರಸ್ತೆಗಳು, ಚರಂಡಿಗಳು, ನಿರಂತರ ವಿದ್ಯುತ್‌ ಸೇವೆ, ಬಸ್‌ ನಿಲ್ದಾಣಗಳು, ಕುಡಿಯುವ ನೀರಿನ ಸೌಲಭ್ಯ, ತೋಟದ ರಸ್ತೆಗಳು, ಉಚಿತ ಅಡುಗೆ ಅನಿಲ ಸಿಲಿಂಡರಗಳ ವಿತರಣೆ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಅನುರಾಧಾ ಚೌಗುಲೆ, ಶ್ರೀಕಾಂತ ಕುಂಬಾರ, ಕವಿತಾ ಲೋಂಡೆ, ವನೀತಾ ಅರಗೆ, ಬಜರಂಗ ಚವ್ಹಾಣ, ಸುಕುಮಾರ ಚೌಗುಲೆ, ಪ್ರಕಾಶ ಪಾಟೀಲ, ದೀಪಕ ಪಾಟೀಲ, ಜಯಸಿಂಗ ಲೋಂಡೆ, ರಮೇಶ ಭಜಂತ್ರಿ, ಗಜಾನನ ಲೋಂಡೆ, ಮಾಣಿಕ ಲೋಂಡೆ, ಯುನುಸ್‌ ಮುಲ್ಲಾ, ದಾದಾ ಪ್ರಜಾರಿ, ಮಂಗೇಶ ಅರಗೆ ರೈತರು ಹಾಗೂ U್ಫ್ರಮಸ್ಥರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

loading...