ಲಾರಿ ಡಿಕ್ಕಿ: ಪಾದಚಾರಿ ಸ್ಥಳದಲ್ಲಿಯೆ ಸಾವು

0
21
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ-4 ಹಿಂಡಾಲ್ಕೊ ಬೈಪಾಸ್ ಹತ್ತಿರ ಪಾದಾಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ ಯಲ್ಲಪ್ಪ ಶೆಟ್ಟೆಪ್ಪ ನಾಯಕ (35) ಮೃತ ವ್ಯಕ್ತಿ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ-4 ಹಿಂಡಾಲ್ಕೋ ಬೈಪಾಸ್ ಹತ್ತಿರ ರಸ್ತೆ ದಾಟುವ ವೇಳೆ ಬೆಳಗಾವಿಯಿಂದ ಅತಿ ವೇಗದಲ್ಲಿ ಚಲಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.
ಲಾರಿ ಚಾಲಕ ತಮೀಳುನಾಡಿನ ಮಾರಿಮುತ್ತು ತುಡಲಯ್ಯಮುತ್ತುನನ್ನು ಉತ್ತರ ಸಂಚಾರಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

loading...