ಲಿಂಗಾಯತ ಪ್ರತೇಕ ಧರ್ಮದ ಮಾನ್ಯತೆ ಪಡೆಯುವವರೆಗೂ ಹೋರಾಟ ಬಿಡಲ್ಲ: ಸಚಿವ ಪಾಟೀಲ

0
18
loading...

ಕನ್ನಡಮ್ಮ ಸುದ್ದಿ-ಕೋಹಳ್ಳಿ: ಲಿಂಗಾಯತ ಎಂಬುದರ ಬಗ್ಗೆ ಸಾಕಷ್ಟು ದಾಖಲೆಗಳು ಸಾರಿ ಹೇಳುತ್ತಿವೆ. ಆದರೂ ಕೆಲವರು ವೀರಶೈವ ಎಂಬುದನ್ನು ಮುಂಚೆ ಸೇರಿಸಿ ಮುಂದಿನ ಪೀಳಿಗೆಗೆ ಸಿಗುವ ಲಾಭವನ್ನು ತಪ್ಪಿಸಲು ಹೊರಟ್ಟಿದ್ದಾರೆ. ಲಿಂಗಾಯತ ಪ್ರತೇಕತೆಯ ಹೋರಾಟ ಹಿಂದಿನಿಂದಲೂ ಇದೆ. ಲಿಂಗಾಯತ ಪ್ರತೇಕ ಧರ್ಮದ ಮಾನ್ಯತೆ ಪಡೆಯುವವರೆಗೂ ಹೋರಾಟ ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಹೇಳಿದರು.
ಶುಕ್ರವಾರ ಸಮೀಪದ ಮಹಾರಾಷ್ಟದ ಜತ್ತ ಶಿವಾನುಭವ ಮಂಟಪದಲ್ಲಿ ಡಿ. 10 ರಂದು ವಿಜಯಪೂರದಲ್ಲಿ ಆಯೋಜಿಸಿರುವ ಲಿಂಗಾಯತ ಮಹಾರ್ಯಾಲಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು. 1891ರಲ್ಲಿಯೇ ಇಂದಿನ ಮಹಾರಾಷ್ಟದ ಸೋಲ್ಲಾಪೂರದ ಎಂ ಎಸ್‌. ಸರದಾರ ಎನ್ನುವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಬೇಕು ಮತ್ತು ಸರಕಾರಿ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಪತ್ರ ಬರೆದಿದ್ದಾರೆ. ಇದಕ್ಕೂ ಮೊದಲು ಮತ್ತು ನಂತರದಲ್ಲಿಯೂ ಅನೇಕರು ಪತ್ರ ಬರೆದಿದ್ದಾರೆ. ಈ ಕುರಿತು ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ.
ಬಸವಕಲ್ಯಾಣದ ಸದ್ಗುರು ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜತ್ತದ ಮರುಳಶಂಕರ ಸ್ವಾಮೀಜಿ, ವಿಜಯಪೂರದ ಸಿದ್ದು ಸಕ್ರಿ, ಅಥಣಿಯ ಗುತ್ತಿಗೆದಾರ ಡಿ ಎಸ್‌. ಠಕ್ಕಣ್ಣವರ, ದಾನಪ್ಪಣ್ಣ ಪಟ್ಟಣ್ಣಶೆಟ್ಟಿ, ತುಕಾರಾಮ ಮಾಳಿ, ಬಸವರಾಜ ಪಾಟೀಲ, ಬಸವರಾಜ ಬಿರಾದಾರ, ಸಂತೋಷ ಪಾಟೀಲ, ಮಹಾದೇವ ಅಂಕಲಗಿ, ಚನ್ನಪ್ಪಣ್ಣ ಹೊರ್ತಿಕರ, ಸಿದ್ದಣ್ಣ ಶಿರಶಾಡ, ರಾಮಣ್ಣ ಸಂತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

loading...