ವಚನಗಳು ಮಾನವ ಕುಲಕ್ಕೆ ದಾರಿದೀಪ: ಡಾ.ಮುರಘರಾಜೇಂದ್ರ ಶ್ರೀಗಳು

0
31
loading...

ಮುಗಳಖೋಡ : 12ನೇ ಶತಮಾನದ ಮಹಾಮನೆಯಲ್ಲಿ ವಚನಗಳ ಚಿಂತನ ಮಂಥನ ಬಸವಾದಿ ಪ್ರಮಥರ ಮಧ್ಯೆ ನಡೆದು ಬರುತ್ತಿತು. ಇಂದು ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆ ನಿಮಿತ್ಯ ವಚನಗಳು ಮಾನವ ಕುಲಕ್ಕೆ ದಾರಿ ದೀಪವಾಗಿವೆ, ಬಸವೇಶ್ವರರು ನುಡಿದ ವಚನ ಇಂದಿನ ನವ ಪೀಳಿಗೆಗೆ ಮಾರ್ಗದರ್ಶನವಾಗಿವೆ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸೋಣ ಎಂದು ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳು ಬಸವ ಪುರಾಣದ ಅನುಭವ ವೇದಿಕೆಯಲ್ಲಿ ಮಾತನಾಡಿದರು.ಅವರು ಸುಕ್ಷೇತ್ರ ಮುಕ್ತಿ ಮಂದಿರ ಮುಗಳಖೊಡದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯ ಪ್ರಯುಕ್ತ ಬಸವ ಪುರಾಣದ ವೇದಿಕೆಯ ಮೇಲೆ ಹಮ್ಮಿಕೊಂಡ ವಚನ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 10,000 ರೂಪಾಯಿ ದ್ವಿತಿಯ ಬಹುಮಾನ 5,000 ರೂಪಾಯಿ ತೃತಿಯ ಬಹುಮಾನ 2,500 ರೂಪಾಯಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಬಸವರಾಜ ಜೋಪಾಟಿ, ಶಿವಕುಮಾರ ಬಿರಾದಾರ, ಮಾರುತಿ ಗೋಕಾಕ, ರಾಯಗೌಡ ಖೇತಗೌಡರ, ಅರುಣ ಮಠಪತಿ, ಪ್ರವೀಣ ಬಂಡಗರ ಸೇರಿದಂತೆ ಮುಗಳಖೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು..

loading...