ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಮಗುವಿನ ಕೊಲೆ‌ ಆರೋಪ

0
25
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:5 ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಹಸೂಗೂಸನ್ನು ಕೊಲೆಗೈದ ಘಟನೆ ಮಂಗಳವಾರ ಸಂಭವಿಸಿದೆ.
ಮಗುವಿನ ತಂದೆ ಹಾಗೂ ಅಜ್ಜಿಯಿಂದ ಕೊಲೆ ಮಾಡಿದ್ದಾರೆ ಎಂಬ ಆರೋಪವನ್ನು ಮಗುವಿನ ತಾಯಿ‌ ಮಾಡುತ್ತಿದ್ದಾಳೆ.ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ದಾಂಡೇಲಿಯ ತಾಯಿಯ ಮನೆಯಲ್ಲಿದ್ದ ಮಗುವಿನ ತಾಯಿ ಕಳೆದ 10 ದಿನಗಳಷ್ಟೇ ಗಂಡನ ಮನೆಗೆ ಹಸಗೂಸನ್ನು ಕರೆದ್ಕೊಂಡು ಕೊಟಬಾಗಿ ಗ್ರಾಮಕ್ಕೆ ಆಗಮಿಸಿದ್ದರು.
ಮಗುವಿನ ತಂದೆ ನಾಮದೇವ ಹಾಗೂ ಆತನ ತಾಯಿ ಮಗುವಿಗೆ ಕೀಟ ನಾಶಕ ಸಿಂಪಡಿಸಿ ಜೋಯೆಲ್ ನಾಮದೇವ ನಡುವಿನಕೇರಿ 1ವರ್ಷದ ಕಂದಮ್ಮ ಕೊಲೆ ಮಾಡಿದ್ದಾರೆ ಎಂದು ಆರೋಪ ಮಗುವಿನ ತಾಯಿ ಮಾಡುತ್ತಿದ್ದಾರೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

loading...