ವಿದ್ಯುತ್‌ ಪೂರೈಕೆ ಸರಿಪಡಿಸದಿದ್ದರೆ ಹೆಸ್ಕಾಂ ಕಚೇರಿಗೆ ಮುತ್ತಿಗೆ

0
23
loading...

ಗ್ರಾಮದಲ್ಲಿರುವ ಹೆಸ್ಕಾಂ ವ್ಯಾಪ್ತಿಯ ಬರುವ ಗ್ರಾಮಗಳಿಗೆ ಮೇಲಿಂದ ಮೇಲೆ ವಿದ್ಯುತ್‌ ಕಡಿತವು ತಲೆನೋವಾಗಿದೆ. ಕಾರಣ ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡಬೇಕೆಂದು ಆಗ್ರಹಿಸಿ, ಕರವೇ ಅಥಣಿ ತಾಲೂಕು ಕಾರ್ಯಧ್ಯಕ್ಷ ಮಾನಿಕ ಸೂರ್ಯವಂಶಿ ಹಾಗೂ ಜೆಡಿಎಸ್‌ ಮುಖಂಡ ಆರ್‌.ಎಂ ಪಾಟೀಲ ನೇತೃತ್ವದಲ್ಲಿ ರೈತರು ಮಂಗಳವಾರ ಹೆಸ್ಕಾಂ ಕಾರ್ಯಲಕಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಳೆದ ವಾರದಿಂದ ಜಂಬಗಿ ಹೆಸ್ಕಾಂ ವ್ಯಾಪ್ತಿಯ ಬರುವ ಗ್ರಾಮಗಳಿಗೆ, ವಿದ್ಯುತ್‌ ಪೂರೈಕೆ ಸರಿಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ರೈತಾಪಿ ಬಂಧುಗಳಿಗೆ ತೀವ್ರ ತೊಂದರೆ ಆಗುತ್ತಿರುವುದು. ಈ ಗ್ರಾಮದ ಪರಿಸರದ ಪ್ರದೇಶಕ್ಕೆ 6 ಗಂಟೆ ತ್ರೀಫೇಸ್‌ ಹಾಗೂ 24 ಗಂಟೆ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆಯಾಗಬೇಕು. 110 ಕೆವಿ ವಿದ್ಯುತ್‌ ಪರಿವರ್ತಕ ಅಳವಡಿಸಬೇಕು ಎಂದು ರೈತರು ಆಗ್ರಹಿಸಿ ಪ್ರತಿಭಟಿಸಿದರು.ಘಟನಾ ಸ್ಥಳಕ್ಕೆ ಅಥಣಿ ಹೆಸ್ಕಾಂ ಸಹಾಯಕ ಅಭಿಯಂತ ಶೇಖರ ಬಹುರೂಪಿ, ಭೇಟಿ ನೀಡಿದರು ಈ ಸಮಯದಲ್ಲಿ ಮಾತನಾಡುತ್ತಾ, ಶೀಘ್ರದಲ್ಲಿ 32 ಗ್ರಾಮಗಳಿಗೆ ತ್ರೀಫೇಸ್‌ ಹಾಗೂ ಸಿಂಗಲ್‌ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ, ಪ್ರತಿಭಟನೆ ಹಿಂಪಡೆಯಲಾಯಿತು. . ಹೆಸ್ಕಾಂ ವಲಯ ಅಧಿಕಾರಿ ನೇಮಣ್ಣವರ ಸಹ ಉಪಸ್ಥಿತರಿದ್ದರು. ತುಕಾರಾಮ ಮಾಳಿ,ಶಾಮು ಮಾನೆ, ಪ್ರಶಾಂತ ಪಾಟೀಲ, ರಾಕೇಶ ವಾಘಮೋರೆ, ಸುರೇಶ ಪಾಟೀಲ, ಶಿವಗೌಡ ಮಿರಜಿ, ಅಬ್ದಲ್‌ ಮುಲ್ಲಾ, ವಿಜಯ ಅಡಹಳ್ಳಿ, ಶ್ರೀಮಂತ ಎಳವಾಕರ, ಮಹಾದೇವ ನಾಯಕ, ಡ. ಕಾನಗೊಂಡ ಮಹಾದೇವ ಮಂಡಳೆ, ಡಿ.ಕೆ.ಪವಾರ, ಪಿಂಟು ಪಾಟೀಲ,ಮುಂತಾದವರು ಪ್ರತಿಭಟನೆಯಲ್ಲಿ ಸಹಭಾಗಿಗಳಾಗಿದ್ದರು.

loading...