ವಿಧಾನಸಭಾ ಚುನಾವಣೆಗೆ ಸಾಮೂಹಿಕ ನಾಯಕತ್ವ: ರಮೇಶ ಜಾರಕಿಹೊಳಿ

0
31
loading...

ಹಾರೂಗೇರಿ 15: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದಲೇ ಕಾಂಗ್ರೆಸ್‌ ಪಕ್ಷದ ಗೆಲುವಿನ ಯಾತ್ರೆ ಆರಂಭಿಸಲು ನಿರ್ಧರಿಸಲಾಗಿದ್ಧು, ಗೋಕಾಕ ಮತ್ತು ರಾಯಬಾಗ ತಾಲೂಕಿನಲ್ಲಿ ಸರಕಾರಿ ಕಾರ್ಯಕ್ರಮಗಳನ್ನು ಆಯೋಜಿಸಿ ಹಾರೂಗೇರಿಯಲ್ಲಿ ಕಾಂಗ್ರೆಸ್‌ ಪಕ್ಷದ ಬೃಹತ್‌ ಸಮಾವೇಶ ಹಮ್ಮಿಕೊಂಡು ಮುಂಬರುವ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದ್ದೇವೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ದೈಹಿಕ ಮಹಾವಿದ್ಯಾಲಯದಲ್ಲಿ ಡಿ.21 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಕಾಂಗ್ರೆಸ್‌ ಪಕ್ಷದ ಬೃಹತ್‌ ಸಮಾವೇಶದ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸಮಾವೇಶದಲ್ಲಿ ಲಕ್ಷಾಂತರ ಜನ ಕಾಂಗ್ರೆಸ್‌ ಕಾರ್ಯಕರ್ತರು ಸೇರುವ ನಿರೀಕ್ಷೆಯಿದ್ದು, ಬೆಳಗಾವಿ ಜಿಲ್ಲೆಯ 12ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ, ಕಳೆದ ನಾಲ್ಕುವರೆ ವರ್ಷಗಳಲ್ಲಿ ಕಾಂಗ್ರೆಸ್‌ ಸರಕಾರ ರೈತರು, ಬಡವರು, ಕೂಲಿಕಾರ್ಮಿಕರು ಹಾಗೂ ಎಸ್‌ಸಿ ಎಸ್‌ಟಿ ಜನಾಂಗದವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸುದೀರ್ಘವಾಗಿ ತಿಳಿಸಿದ್ದಾರೆ, ಇನ್ನೇನು ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಸಿಎಂ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಾಗಿದೆ. ಕುಡಚಿ ಹಾಗೂ ರಾಯಬಾಗ ಮತಕ್ಷೇತ್ರದಿಂದ ಬಹಳಷ್ಟು ಜನ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿದ್ದು, ಹೈಕಮಾಂಡಗೆ ಆಯಾ ಕ್ಷೇತ್ರದ ವರದಿ ಈಗಾಗಲೇ ಸಲ್ಲಿಕೆಯಾಗಿದೆ, ಪ್ರತಿಯೊಂದು ಕೇತ್ರದ ಅಭ್ಯರ್ಥಿಗಳ ಟಿಕೆಟ್‌ ನೀಡುವುದನ್ನು ಹೈಕಮಾಂಡ ವರಿಷ್ಠರು ನಿರ್ಧರಿಸುತ್ತಾರೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.ವಿಧಾನ ಪರಿಷತ್‌ ಸದಸ್ಯ ವಿವೇಕರಾವ ಪಾಟೀಲ ಮಾತನಾಡಿ, ರಾಯಬಾಗ ಮತ್ತು ಕುಡಚಿ ಕ್ಷೇತ್ರದಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದ ಯಶಸ್ಸಿಗೆ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಅಥಣಿಯ ಮಾಜಿಶಾಸಕ ಶಹಜಹಾನ ಡೊಂಗರಗಾಂವ, ಜಿಪಂ ಸದಸ್ಯ ಅಕ್ಬರಲಿ ಮಹಾರೂಫ್‌, ಕಾಗವಾಡ ಸಕ್ಕರೆ ಕಾರ್ಖಾನೆ ಅಧ್ಯಕ್ಷ್ಯ ಕಲ್ಲಪ್ಪ ಮಗೆನ್ನವರ, ಮೋಹನ ಶಹಾ, ಜೆಡಿಎಸ್‌ ಕೋರ್‌ ಕಮೀಟಿ ಸದಸ್ಯ ಶ್ರೀಮಂತ ಪಾಟೀಲ, ಕಾಡಾ ಅಧ್ಯಕ್ಷ್ಯ ಈರಗೌಡ ಪಾಟೀಲ, ಕಿರಣ ಪಾಟೀಲ, ಶೀತಲ ಪಾಟೀಲ, ತಾಪಂ ಅಧ್ಯಕ್ಷ್ಯ ರವಿಶಂಕರ ನರಗಟ್ಟಿ, ಮಹೇಂದ್ರ ತಮ್ಮಣ್ಣವರ, ಗೋಪಾಲದಾದಾ ಪಾಟೀಲ,ರಾಜೇಶ ಕದಂ, ಹಾಲಪ್ಪ ಗಾಳಿ, ಡಿ.ಎಸ್‌ ನಾಯಕ, ಸಿ.ಬಿ ಕುಲಗೋಡ, ಕಾಂತಾ ನಾಯಿಕ, ರಾಮಣ್ಣಾ ಗಸ್ತಿ, ಮುತ್ತಪ್ಪ ಗಸ್ತಿ, ರವಿ ಗಸ್ತಿ, ಜಾಸ್ಮೀನ್‌ ಅಲಾಸೆ, ಜ್ಞಾನೇಶ್ವರ ಹಳ್ಳೂರ, ಎನ್‌.ಎಸ್‌ ಚೌಗಲಾ, ರಾಜು ಶಿರಗಾಂವೆ, ಬಸವರಾಜ ಬುಟಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಬಾಕ್ಸಲರಾಜ್ಯ ಹಾಗೂ ದೇಶದಲ್ಲಿ ತ್ತೆರುವ ಕೋಮುವಾದಿ ಪಕ್ಷವನ್ನು ಮಟ್ಟಹಾಕಲು ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದೇನೆ.

loading...