ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

0
23
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಗಳ ಹೊಂದಿದ ಮಾದರಿ ವಾರ್ಡ್‌ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು ಈಗಾಗಲೇ 1ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು 4ನೇ ವಾರ್ಡ್‌ ಸದಸ್ಯ ಹಾಗೂ ಬಿಜೆಪಿ ಮುಖಂಡ ಪರಸುರಾಮ ಅಡಗಿಮನಿ ಹೇಳಿದರು.
ಸ್ಥಳೀಯ ಲಕ್ಷ್ಮಿ ನಗರದಲ್ಲಿ 10ಲಕ್ಷ ರೂಗಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮತದಾರರು ಆಶೀರ್ವದಿಸಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಪ್ರೋತ್ಸಾಹಕರ ವಾತಾವರಣ ನಿರ್ಮಿಸುತ್ತಿದ್ದು ಪುರಸಭೆ ವ್ಯಾಪ್ತಿಯಲ್ಲಿ ಮಾದರಿ ವಾರ್ಡ್‌ ನಿರ್ಮಾಣಕ್ಕಾಗಿ ತಾವೂ ನಿರಂತರವಾಗಿ ಶ್ರಮಿಸುತ್ತಿದ್ದು ಈಗಾಗಲೇ 1ಕೋಟಿ ರೂಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಹುದಿನ ಬೇಡಿಕೆಯ ಕೋರಮಾರ ರಸ್ತೆಯನ್ನು ಸುಧಾರಣೆಗೆ 30ಲಕ್ಷ, ವಾರ್ಡನಲ್ಲಿ ಉದ್ಯಾನವನಕ್ಕೆ 3ಲಕ್ಷ, 10ಲಕ್ಷ ಸಿಸಿ ರಸ್ತೆ, ಅಂಬಾಭವನ ದೇವಾಲಯ ಹತ್ತಿರ ಪೇವರ ರಸ್ತೆಗೆ 2ಲಕ್ಷ, 9ಲಕ್ಷ 50ಸಾವಿರ ರೂಗಳ ಮರಗಮ್ಮ ದೇವಾಲಯ ಸಮುದಾಯ ಭವನ, 10ಲಕ್ಷ ಗಾರ್ಡನ, ಅಂಬಿಗರ ಚೌಡಯ್ಯ ವೃತ್ತ, ಕೆರೆ ಪಕ್ಕದಲ್ಲಿ ಹಾಗೂ ಮರಗಮ್ಮ ದೇವಾಲಯ ಹತ್ತಿರ ತಲಾ ಒಂದು ಕೊಳವೆಭಾವಿ, ಸಿಸ್ಟನ್‌, ಟ್ಯಾಂಕರ್‌, ಲಕ್ಷ್ಮಿ ದೇವಾಲಯ ಹತ್ತಿರ 3ಲಕ್ಷ ರೂಗಳ ಡಾಂಬರೀಕರಣ ಸೇರಿದಂತೆ 1ಕೋಟಿ ರೂಗಳನ್ನು ವಾರ್ಡಿನಲ್ಲಿ ಕಾಮಗಾರಿಗೆ ಬಳಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಭಿಯಂತರ ವಿಲಾಸ ರಾಠೋಡ, ಮಾಜಿ ಸದಸ್ಯ ನಿಸಾರ್‌ ಚೌಧರಿ, ಗುತ್ತಿಗೆದಾರ ಸುಭಾಷ ಚಕ್ರಮನಿ, ಮಲ್ಲು ಮಿಣಜಗಿ, ಜಂಗಲಬಾಷಾ ದಳವಾಯಿ, ಅಶೋಕ ಬಡಿಗೇರ, ಬಸವರಾಜ ಬಿಸಾನಾಳ, ಶಮ್ಮೀಸುದ್ದೀನ ಮನಿಯಾರ, ಬಿಜೆಪಿ ಮುಖಂಡ ಬಸವರಾಜ ಬಿಜಾಪೂರ ಸೇರಿದಂತೆ ಮುಂತಾದವರು ಇದ್ದರು, ಪುರಸಭೆ ಸದಸ್ಯ ಪರಸುರಾಮ ಅಡಗಿಮನಿ ಪೂಜೆ ಸಲ್ಲಿಸಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

loading...