ವಿವಿಧ ಶಬ್ಧಗಳ ಹೆಸರಲ್ಲಿ ಪುರೋಹಿತರು ಆಳುತ್ತಿದ್ದಾರೆ: ಶ್ರೀಗಳು

0
36
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಇತ್ತೀಚೆಗೆ ಉಡುಪಿಯಲ್ಲಿ ಧರ್ಮ ಸಂಸತ್ತಿನಲ್ಲಿ ಅಸ್ಪೃಶ್ಯತೆ ನಿರ್ನಾಮ ಮಾಡಲು ಸಂಕಲ್ಪ ಮಾಡಿದ್ದಾರೆ. ಅಸ್ಪೃಶ್ಯತೆ ಇದೆ ಎಂಬುವುದು ಈಗ ಅರಿವಾಗಿದೆ. ವಿವಿಧ ಶಬ್ಧಗಳ ಮೂಲಕ ಪುರೋಹಿತರು ನಮ್ಮನ್ನು ಆಳುತ್ತಿದ್ದಾರೆ ಎಂದು ಧರ್ಮ ಸಂಸತ್ತ ವಿರುದ್ಧ ನಿಜಗುಣಾನಂದ ಸ್ವಾಮೀಜಿ ಹರಿಹ್ದಾಯದರು.
ಬಧುವಾರ ಸದಾಶಿವ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ ಡಾ. ಬಿ.ಆರ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಮೌಢ್ಯ ವಿರೋಧಿ ಸಂಕಲ್ಪ ದಿನದ ಸಮಾವೇಶದಲ್ಲಿ ಮಾತನಾಡಿದ ಅವರು, 10 ಪೈಸೆ ದಾರ ದೇಶವನ್ನು ವಿಭಜನೆ ಮಾಡುತ್ತಿದೆ. ಮಾಧ್ಯಮ ಉದ್ಯಮವಾಗುತ್ತಿದೆ. ಬಹುತೇಕ ಮಾಧ್ಯಮಗಳು ಜನಸಾಮಾನ್ಯರ ಧ್ವನಿಯಾಗುತ್ತಿಲ್ಲ ಎಂದು ಮಾಧ್ಯಮಗಳ ವಿರುದ್ದ ವಾಗ್ದಾಳಿ ನಡೆಸಿದ್ದರು.
90 ರಷ್ಟು ಅಸ್ಪಶ್ಯರು ಇದ್ದಾರೆ. 2 ರಷ್ಟು ಮಾತ್ರ ಇರುವ ಮೇಲವರ್ಗದವರು ನಮ್ಮನ್ನೂ ಆಳುತ್ತಿದ್ದಾರೆ. ದೇಶವನ್ನು ಕಟ್ಟವುದನ್ನು ಬಿಟ್ಟು ನಿರ್ನಾಮ ಮಾಡುತ್ತಿದ್ದಾರೆ. ಪುರಾಣ ಎಂಬವುದು ಮೌಢ್ಯರ ಗೋಷ್ಠಿಯಾಗಿದೆ. ಪಂಚಾಂಗ ಹೇಳುವವರು ಮಾನಸಿಕ ಭಯೋತ್ಪಾದಕರು. ಕೇಳವರ್ಗದವರು ಮೇಲವರ್ಗದವರ ಹೆಣ್ಣು ಮಕ್ಕಳನ್ನು ಕಾಪಾಡಿದ್ದಾರೆ. ಆದರೆ ಕೇಳವರ್ಗದ ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಯಲ್ಲಿ ಹಾಳು ಮಾಡಿದ್ದಾರೆ. ಹೊಂದು ಧರ್ಮದ ಹಬ್ಬ ಹರಿದಿನಗಳನ್ನು ವಿರೋಧಿಸಿ ಬುದ್ಧ, ಬಸವ ಮತ್ತು ಅಂಬೇಡ್ಕರ್‍ನ್ನು ಪೂಜಿಸಿ. ಮಠ ಮಾನ್ಯಗಳಿಗೆ ನೀಡುತ್ತಿರುವ ಹಣವನ್ನು ಬೀಟ್ಟು ಸಮಾಜ ಸುಧಾರಣೆ ಮಾಡಲು ಉಪಯೋಗಿಸಿ ಎಂದರು.
ನಟ ಪ್ರಕಾಶ ರೈ ಮಾತನಾಡಿ, ರಾಷ್ಟೀಯತೆ ಮತ್ತು ಹಿಂದುತ್ವ ಒಂದೇ ಎಂದು ಇತ್ತೀಚೆಗೆ ಉಡುಪಿಯಲ್ಲಿ ರಾಜಕಾರಣಿ ಓರ್ವ ಹೇಳಿಕೆ ನೀಡಿದ್ದಾರೆ. ಒಂದು ಸಮಾಜವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ. ಕಳ್ಳರು, ಪುಂಡರು ಮತ್ತು ಹೇಡಿಗಳು ನಮ್ಮನ್ನು ಭಯಗೊಳ್ಳಿಸಿ ಅದರ ಬಲವನ್ನು ಪಡೆದುಕೊಳ್ಳುತ್ತಿದ್ದಾರೆ. 12 ನೇ ಶತಮಾನದಲ್ಲಿ ಬಸವಣ್ಣ ಅವರು ಹೇಳಿದ ಮಾತುಗಳಿಂದ ಅವತ್ತು ಬದಲಾವಣೆ ಬಯಸಿದ್ದರು. ಆದರೆ ಇವತ್ತಿಗೂ ಅದು ಕಡಿಮೆಯಾಗುತ್ತಿಲ್ಲ. ಬುದ್ಧಿವಂತರು ಸಮಾಜದಲ್ಲಿ ಮೌಢ್ಯದ ಬೀಜವನ್ನು ಬಿತ್ತುತ್ತಿದ್ದಾರೆ. ಬುದ್ಧ ಬಸವನ್ನು ನಮ್ಮೊಳಗೆ ಮಾತ್ರ ಇರಿಸದೇ ಪ್ರತಿಯೊಬ್ಬರು ಬುದ್ಧ ಬಸವರಾಗಬೇಕು ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಇತ್ತೀಚೆಗೆ ಶಾಸಕ ಸಂಜಯ ಪಾಟೀಲ ಹಿಂದು ಅಲ್ಲ ಎಂದು ಹೇಳಿದೆ. ಹಿಂದು ಧರ್ಮಕ್ಕಿಂತಲೂ ಜೈನ ಧರ್ಮ ಶ್ರೇಷ್ಠವಾಗಿದೆ ಎಂದು ಹೇಳಿದೆ ಅದನ್ನು ತಪ್ಪಾಗಿ ಅಥೈಸಲಾಗಿದೆ. ಸಶ್ಮಾನದಲ್ಲಿ ಮಲಗುತ್ತಿಲ್ಲ. ವಾಹನದಲ್ಲಿ ಮಲಗುತ್ತಿದ್ದಾರೆ ಎಂದು ಶಂಕರ ಮುನವಳ್ಳಿ ಹೇಳುತ್ತಿದ್ದಾರೆ. ಅವರು ಹೇಳಿರುವ ಹೇಳಿಕೆಯನ್ನು ಸಲಹೆ ಎಂದು ತಿಳಿದುಕೊಂಡು ನೆಲದ ಮೇಲೆ ಮಲಗುತ್ತೇನೆ. ನಾನು ಕಾರ್ಯಕ್ರಮ ಮಾಡುತ್ತಿರುವದನ್ನು ಮುನವಳ್ಳಿ ಟೀಕಿಸುತ್ತಿದ್ದಾರೆ. ದೆಹಲಿಯಲ್ಲಿಯೂ ಅಂಬೇಡ್ಕರ್‍ಗೆ
ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನಗೆ ರಾಜಕೀಯಕ್ಕಿಂತ ಮಾನ ಬಂಧುತ್ವ ವೇದಿಕೆ ಮುಖ್ಯವಾಗಿದೆ. ವಿರೋಧಿಗಳು ಎಷ್ಟು ಕೆಡನ್ನು ಬಯಸುತ್ತಿದ್ದಾರೆ ಅಷ್ಟು ಒಳ್ಳೆದಾಗುತ್ತಿದೆ. 11 ತಿಂಗಳಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿದ್ದೇನೆ. ಮುಂದಿನ ವರ್ಷದಲ್ಲಿ ಯರಗಟ್ಟಿಯಲ್ಲಿಯೂ ಸಕ್ಕರೆ ಕಾರ್ಖಾನೆ ಕಟ್ಟುತ್ತಿದ್ದೇವೆ. ಜನೇವರಿಗೆ ಎರಡು ಹೆಲಿಕ್ಯಾಪ್ಟರ್ ತರುತ್ತಿದ್ದೇನೆ. ರಾಮಮಂದಿರ ಕಟ್ಟು ಭರದಲ್ಲಿ ಅಂಬೇಡ್ಕರ್ ಮರೆಮಾಡುತ್ತಿದ್ದಾರೆ. ಡಿ. 6ರಂದು ಕಾರ್ಯಕ್ರಮ ಮಾಡುತ್ತಿರಯವ ಉದೇಶ ಅಂಬೇಡ್ಕರ್ ಅವರ ಇತಿಹಾಸ ಸಾರುವಂತಹ ಪ್ರಯತ್ನ ಮೌಢ್ಯವನ್ನು ಸಮಾಜದಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭು ಚನ್ನಬಸವ ಸ್ವಾಮೀಜಿ, ಶರಣ ಬಸವ ದೇವರು, ಕೆ. ನೀಲಾ, ಡಾ. ಪುರುಷೋತ್ತಮ ಬಿಳಿಮಲೆ, ಅನಂತ ನಾಯ್ಕ ಮತ್ತು ಆರ್ ಜಯಕುಮಾರ, ಮಾಜಿ ವಿಧಾನ ಪರಷತ್ತ ಸದಸ್ಯ ವೀರಕುಮಾರ ಪಾಟೀಲ, ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ, ಮೇಯರ್ ಸಂಜೋತಾ ಬಾಂದೇಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...