ಶಾಂತಿಯತ್ತ ಮುಖ ಮಾಡಿದ ಕುಮಟಾ

0
28
loading...

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದಲ್ಲಿ ಸೋಮವಾರ ಬಂದ್‌ ಪ್ರತಿಭಟನಾ ಮೆರವಣಗೆಯಲ್ಲಿ ನಡೆದ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಕೃತ್ಯದಿಂದ ಕುಮಟಾ ಭೂದಿ ಮುಚ್ಚಿದ ಕೆಂಡದಂತಿತ್ತು. ಆದರೆ, ಮಂಗಳವಾರ ಗಲಭೆಯ ಉದ್ವಿಗ್ನತೆ ಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದು ಶಾಂತಿಯತ್ತ ಮುಖ ಮಾಡಿದೆ.
ಪರೇಶ ಮೇಸ್ತ ಸಾವನ್ನು ಖಂಡಿಸಿ ನಡೆದ ಪ್ರತಿಭಟನೆಯಿಂದ ಕುಮಟಾ ನಿಧಾನವಾಗಿ ಸಾವರಿಸಿಕೊಳ್ಳುತ್ತಿದೆ. ಉದ್ವಿಗ್ನತೆ ಕಡಿಮೆಯಾಗಿರುವುದರಿಂದ ಪಟ್ಟಣ ಸ್ವಲ್ಪ ಮಟ್ಟಿಗೆ ಸುಧಾರಿಕೊಂಡಿದೆ. ಹಲವು ಅಂಗಡಿ-ಮಂಗಟ್ಟುಗಳು ತೆರೆದಿದ್ದು ಜನರು ತಮ್ಮ ತಮ್ಮ ವ್ಯವಹಾರದಲ್ಲಿ ತೋಡಗಿರುವ ದೃಶ್ಯ ಕಂಡು ಬಂದಿದೆ.
ಹೊನ್ನಾವರದ ಪರೇಶ ಮೇಸ್ತ ಅವರ ಸಾವಿನ ಪ್ರಕರಣವನ್ನು ಖಂಡಿಸಿ ಹಿಂದುಪರ ಸಂಘಟನೆಗಳು ನೀಡಿದ ಬಂದ್‌ ಕರೆಗೆ ಕುಮಟಾದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಕಲ್ಲು ತೂರಾಟದ ಜನತೆಗೆ ಹೆದ್ದಾರಿಯಲ್ಲಿ ಟೈಯರ್‌ಗಳಿಗೆ ಬೆಂಕಿ ಹಾಕಿದ್ದರು. ಲಾಠಿ ಪ್ರಹಾರ ಮಾಡಿದ ಪೊಲೀಸರ ಮೇಲೆ ಪ್ರತಿ ದಾಳಿ ನಡೆಸಿದ, ಪ್ರತಿಭಟನಾಕಾರರು ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಿ, ಸಂಪೂರ್ಣ ಭಸ್ಮ ಮಾಡಿದ್ದರು. ಆಕ್ರೋಶಗೊಂಡ ಎಲ್ಲಡೆ ಪೋಲಿಸರು ಸರ್ಪಗಾವಲು ಹಾಕಿಕೊಂಡಿದ್ದು, ಎಲ್ಲಿಯು ಕೂಡ ಗುಂಪಾಗಿ ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲಾಗಿದೆ. ಒಟ್ಟಾರೆ ಕುಮಟಾದಲ್ಲಿ ಉದ್ವಿಗ್ನತೆಯ ಕತ್ತಲೆ ಕಳೆದು ಶಾಂತಿಯ ಬೆಳಕು ಮೂಡುತ್ತಿದೆ. ಆದರೆ ಘಟನೆಯ ಕರಾಳತೆಯಿಂದ ಪಟ್ಟಣಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿದ್ದು, ಶೀಘ್ರವೇಸೌಹಾರ್ದತೆ ಮರುಕಳಿಸಿ, ಶಾಂತಿ ನೆಲೆಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

loading...