ಶಾಸಕ ಪಾಟೀಲರಿಂದ ಗುಡುಮಕೇರಿಗೆ ಸಾಂತ್ವನ

0
24
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಇತ್ತಿಚೆಗೆ ತಾಲೂಕಿ ಕೆ.ಕೆ.ಕೊಪ್ಪ ಗ್ರಾಮದ ಸೋಮೇಶ್ವರ ನಗರದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 5 ಲಕ್ಷ ಮೊತ್ತದ ವಿವಿಧ ಪೀಠೋಪಕರಣ, ದ್ವಿಚಕ್ರವಾಹನ, ನಗದು, ಬಂಗಾರ, ಇನ್ನಿತರ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸಿರುವ ಸಂತೋಷ ಗುಡುಮಕೇರಿ ಅವರ ಮನೆಗೆ ಗ್ರಾಮೀಣ ಶಾಸಕ ಸಂಜಯ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು.
ಆಕಸ್ಮಿಕ ಬೆಂಕಿ ಅನಾಹುತದಿಂದ ಬೀದಿ ಪಾಲಾಗುತ್ತಿರುವ ಸಂತೋಷ ಕುಟುಂಬಕ್ಕೆ ವಾಸದ ಮನೆ ಹಾಗೂ ಸರ್ಕಾರದಿಂದ ದೊರೆಯುವ ಇನ್ನಿತರ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.
ತಾ.ಪಂ ಸದಸ್ಯ ಕಲ್ಲಪ್ಪಾ ಸಂಪಗಾವಿ, ಸದೆಪ್ಪಾ ಸಂಬರಗಿ, ಲಕ್ಷ್ಮಣ ತಳವಾರ, ಸಂಜು ವಾಘ, ಸೋಮಾಜಿ ಬಸಣ್ಣವರ, ಶೇಖರಗೌಡಾ ಪಾಟೀಲ, ಯಲಶೆಟ್ಟಿ ಗಾಣಗಿ, ರಾಯಪ್ಪಾ ನಂದಿ, ಶಿದ್ದಪ್ಪಾ ನೇರಲಗಿ, ಶಿವಪುತ್ರ ಪಂತರ, ಸುಧರ್ಶನ ಪಾಟೀಲ, ಪ್ರಕಾಶ ಕರೆಣ್ಣವರ,ಸಂಜು ಕರೆನ್ನವರ, ನಾರಾಯಣ ಸಂಬರಗಿ, ರಾಯಪ್ಪಾ ಕರೆನ್ನವರ ಮುಂತಾದವರು ಉಪಸ್ಥಿತರಿದ್ದರು.

loading...