ಶಿವಾಜಿ ಮಹಾರಾಜರ ಆದರ್ಶಗಳೇ ರಾಜಕಾರಣಕ್ಕೆ ಸ್ಪೂರ್ತಿ : ಶಶಿಕಲಾ ಜೊಲ್ಲೆ

0
21
loading...

ಚಿಕ್ಕೋಡಿ 18: ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಶಿವಾಜಿ ಮಹಾರಾಜರ ಆದರ್ಶಗಳ ಚಿತ್ರಣ ನಮ್ಮಕಣ್ಣ ಮುಂದೆ ಸುಳಿದಾಡುತ್ತಿದ್ದು, ಅವರಆದರ್ಶಗಳೇ ನಮಗೆಲ್ಲಾ ಸ್ಪೂರ್ತಿ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ತಾಲೂಕಿನ ಕುರ್ಲಿ ಗ್ರಾಮದ ಕ್ರಾಂತಿನಗರದಲ್ಲಿ ನೂತನವಾಗಿ ಸುಮಾರು 12 ಲಕ್ಷ.ರೂ. ಗಳ ಅನುದಾನದಲ್ಲಿ ನಿರ್ಮಿಸಲಾದ ಮರಾಠಾ ಸಮುದಾಯ ಭವನದ ವಾಸ್ತುಶಾಂತಿ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಿ ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಕಾರರತ್ನ ಅಣ್ಣಾಸಾಹೇಬ ಜೊಲ್ಲೆ ,ತಾ.ಪಂ. ಸದಸ್ಯಕಿರಣ ನಿಕಾಡೆ, ಎಪಿಎಂಸಿ ಸದಸ್ಯ ಸಂಜಯ ಶಿಂತ್ರೆ, ರಘುನಾಥ ಪಾಟೀಲ, ಮಾಜಿಅಧ್ಯಕ್ಷೆ ಮೀನಾತಾಯಿ ಪಾಟೀಲ, ಸರಸ್ವತಿ ಚೌಗುಲೆ, ಹಾಲಸಿದ್ಧನಾಥ ಸಕ್ಕರೆಕಾಖಾನೆಯ ಸಂಚಾಲಕ ಸಮಿತ ಸಾಸನೆ, ಕೆ.ವಾಯ್‌ ಮಗದುಮ್ಮ, ಪ್ರಮೋದ ಕಾಂಬಳೆ, ಅಮೋಲ ಮಾಳಿ, ಸುಭಾಷ ಪ್ರತಾಪ, ರಾಜೇಂದ್ರ ಶಿಂತ್ರೆ, ಮಚ್ಛೇಂದ್ರ ನಿಕಾಡೆ, ಸೀತಾರಾಮ ಚೌಗುಲೆ, ರಂಗರಾವ ಶೆಟಕೆ, ಅರುಣಾಖಂದಾರೆ, ಸುಮುನ ಯಾದವ, ಬಿಜೆಪಿ ಕಾರ್ಯಕರ್ತರು, ಮಂಡಳದ ಪದಾಧಿಕರಿಗಳು, ಮಹಿಳೆಯರು ಹಾಗೂಗ್ರಾಮಸ್ಥರು ಉಪಸ್ಥಿತರಿದ್ದರು.

loading...