ಶೈಕ್ಷಣಿಕ ಸಲಹಾ ಸಮಿತಿಗೆ ನೇಮಕ

0
21
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ನವದೆಹಲಿಯ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಸಿ.ಇ.ಸಿ. ಶೈಕ್ಷಣಿಕ ಸಲಹಾ ಪರಿಷತ್ತಿನ ಸದಸ್ಯರಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಹೊಸಮನಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
ಪ್ರೊ. ಶಿವಾನಂದ ಹೊಸಮನಿ ಅವರು ನವದೆಹಲಿಯ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ, ಅಂಗವಾದ ಶೈಕ್ಷಣಿಕ ಸಮುಚ್ಚಯ ಸಂವಹನ (ಸಿ.ಇ.ಸಿ) ಸಂಸ್ಥೆಯ ಸದಸ್ಯತ್ವ ಪಡೆದಿರುವ ಉತ್ತರ ಕರ್ನಾಟಕದ ಪ್ರಥಮ ಕುಲಪತಿಯಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ವಿವಿಯ ಕುಲಸಚಿವ ಪ್ರೊ. ಸಿದ್ದು ಆಲಗೂರ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿ ವರ್ಗ, ಶಿಕ್ಷಕರು, ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಪ್ರೊ.ಶಿವಾನಂದ ಹೊಸಮನಿ ನೇಮಕಕ್ಕೆ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

loading...