ಸಂಕಲ್ಪ ಜಾತ್ರೆಗೆ ಗೃಹ ಸಚಿವ ರಾಜನಾಥಸಿಂಗ ಇವರಿಗೆ ಆಹ್ವಾನ

0
20
loading...

ಮುಗಳಖೋಡ 21: ಬೆಳಗಾವಿ ಜಿಲ್ಲೆಯ ಮುಗಳಖೋಡದಲ್ಲಿ 2018 ರ ಜನವರಿ 12 ರಿಂದ 14 ರವರೆಗೆ ನಡೆಯಲಿರುವ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತ ಸರ್ಕಾರದ ಗೃಹ ಸಚಿವರಿಗೆ ಅಧಿಕೃತವಾಗಿ ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಮುರಘರಾಜೇಂದ್ರ ಶ್ರೀಗಳು ಆಹ್ವಾನಿಸಿದರು.

ನವದೆಹಲಿಯಲ್ಲಿ ಗುರುವಾರ ಪೀಠಾಧಿಪತಿಗಳಾದ ಡಾ.ಮುರಘರಾಜೇಂಧ್ರ ಶ್ರೀಗಳು ನೀಡಿದ ಅಹ್ವಾನವನ್ನು ಅವರು ಸ್ವೀಕರಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿದ್ದಾರೆ.
ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಮಠದ ಪರಂಪರೆಯನ್ನು ಗೃಹ ಸಚಿವ ರಾಜನಾಥಸಿಂಗ ರಿಗೆ ವಿವರಿಸಿದರು. ಹುಕ್ಕೇರಿಯ ಶ್ರೀಗಳು, ಸಂಸದ ಭಗವಂತ ಖೂಬಾ, ಸಂಸದ ಸುರೇಶ ಅಂಗಡಿ, ಮುಂತಾದವರು ಇದ್ದರು.

 

loading...