ಸಂಸ್ಥೆಗಳ ಪ್ರಗತಿಗೆ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಅವಶ್ಯ: ರಾಜೇಂದ್ರ

0
21
loading...

ಬೆಟಗೇರಿ:ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಪ್ರಗತಿ ಸಾಧಿಸಬೇಕಾದರೆ ಆಡಳಿತ ಮಂಡಳಿ ಸದಸ್ಯರ ಸಹಕಾರ, ಸಿಬ್ಬಂದಿಯ ಪ್ರಾಮಾಣಿಕ ಸೇವೆಯ ಪ್ರಯತ್ನ ಅವಶ್ಯಕ ಎಂದು ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ದಿ. ಕೌಜಲಗಿ ಅರ್ಬನ್‌ ಕೋ-ಆಫ್‌ ಕ್ರೆಡಿಟ್‌ ಬ್ಯಾಂಕ್‌ ಲಿ. ಕೌಜಲಗಿ ಇದರ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸಮೀಪದ ಕೌಜಲಗಿ ಗ್ರಾಮದ ದಿ. ಕೌಜಲಗಿ ಅರ್ಬನ್‌ ಕೋ-ಆಫ್‌ ಕ್ರೆಡಿಟ್‌ ಬ್ಯಾಂಕ್‌ ಲಿ. ಕೌಜಲಗಿ ಇವರು ಮಂಗಳವಾರ ಡಿ.26 ರಂದು ಆಯೋಜಿಸಿದ ಆಡಳಿತ ಮಂಡಳಿ ಸಭೆ ಹಾಗೂ ವೃತ್ತಿ ಪರ ನಿರ್ದೇಶಕರಾಗಿ ಆಯ್ಕೆಗೊಂಡ ನೂತನ ಸದಸ್ಯರ ಸ್ವಾಗತ, ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೃತ್ತಿ ಪರ ನಿರ್ದೇಶಕರಾಗಿ ನ್ಯಾಯವಾದಿ ಎಮ್‌.ಐ. ನೀಲಣ್ಣವರ ಬ್ಯಾಂಕಿನ ನೂತನ ಕಟ್ಟಡದಲ್ಲಿ ಆಯೋಜಿಸಿದ ಮೊಟ್ಟ ಮೊದಲ ಸಭೆಗೆ ಹಾಜರಿದಿದ್ದು ಅವರ ಅದೃಷ್ಟವಾಗಿದೆ.ಅರ್ಬನ ಬ್ಯಾಂಕ್‌ ನೀತಿ, ನಿಯಮಗಳಂತೆ ಈ ಬ್ಯಾಂಕಿಗೆ ಇಬ್ಬರೂ ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬ್ಯಾಂಕಿನ ಗ್ರಾಹಕ ತಾನು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕಿನ ಏಳಿಗೆ ಸಾಧ್ಯ ಎಂದರು.

ಬ್ಯಾಂಕಿನ ಉಪಾಧ್ಯಕ್ಷೆ ಗೌರವ್ವ ಭೋವಿ, ಶಿವಾನಂದ ಲೋಕನ್ನವರ, ಅಶೋಕ ಪರುಶೆಟ್ಟಿ, ಅಡಿವೆಪ್ಪ ದಳವಾಯಿ, ಈರಣ್ಣ ಹುದ್ದಾರ, ಸುಭಾಷ ಕೌಜಲಗಿ, ಶ್ರೀಶೈಲ ಗಾಣಿಗೇರ, ಭೀಮಪ್ಪ ಉದ್ದಪ್ಪನ್ನವರ, ಅಶೋಕ ಹೊಸಮನಿ, ಮಹಾದೇವಿ ಶಿವನಮಾರಿ, ಶಿವಲಿಂಗಪ್ಪ ಮರೆನ್ನವರ, ಹಬೀಬ ಮುಲ್ತಾನಿ, ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ರಾಮಣ್ಣ ಬಳಿಗಾರ, ಸುರೇಶ ಸಿದ್ನಾಳ, ಶ್ರೀಶೈಲ ಗಾಣಗಿ, ಶಿವಾಜಿ ನೀಲಣ್ಣವರ, ಲಕ್ಷ್ಮಣ ಚಂದರಗಿ, ಶಿವಲಿಂಗಪ್ಪ ಭಾಗೋಜಿ, ಟಿ.ಎಲ್‌.ಲೇಂಡ್ವೆ, ಹಜರತ್‌ ಮಿರ್ಜಾನಾಯ್ಕ, ಚಂದ್ರಶೇಖರ ನೀಲಣ್ಣವರ, ವಿಠಲ ಕೋಣಿ, ಲಕ್ಕಪ್ಪ ಚಂದರಗಿ, ಶ್ರೀಧರ ದೇಯನ್ನವರ, ಶಿವನಪ್ಪ ಮಾಳೇದ, ಮನೋಹರ ಕತ್ತಿ, ದಿ. ಕೌಜಲಗಿ ಅರ್ಬನ್‌ ಬ್ಯಾಂಕ್‌ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ವರ್ಗ, ಬೆಟಗೇರಿ ಮತ್ತು ಕೌಜಲಗಿ ಗ್ರಾಮದ ಬ್ಯಾಂಕಿನ ಶೇರ್‌ ಮೆಂಬರ್‌ ಸದಸ್ಯರು, ಗ್ರಾಮಸ್ಥರು, ಉಪಸ್ಥಿತರಿದ್ದರು.
ಬ್ಯಾಂಕ್‌ ವ್ಯವಸ್ಥಾಪಕ ಬಸವರಾಜ ಕೇವಟಿ ಸ್ವಾಗತಿಸಿ, ಕೊನೆಗೆ ವಂದಿಸಿದರು. ಬಸವರಾಜ ಪಣದಿ ಕಾರ್ಯಕ್ರಮ ನಿರೂಪಿಸಿದರು.

loading...