ಸತತ ಅಧ್ಯಯನದಿಂದ ಪರಿಕ್ಷೇಯಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯ: ನಂದೀಶ

0
29
loading...

ಕನ್ನಡಮ್ಮ ಸುದ್ದಿ-ರಾಮದುರ್ಗಃ ವಿದ್ಯಾರ್ಥಿಗಳು ಸಮಯ ಪಾಲನೆ ಶಿಸ್ತು ಬದ್ದವಾಗಿ ಅಧ್ಯಯನ ಮಾಡಿದಾಗ ಮಾತ್ರ ಎಸ್‌ಎಸ್‌ಎಲ್‌ಸಿ ಪರಿಕ್ಷೇಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ರಾಣೆಬೇಣ್ಣೂರ ನಂದೀಶ ಆಮ್‌ಕಾಡ್‌ ಸಂಸ್ಥೆಯ ತರಬೇತುದಾರ ನಂದೀಶ ಶೆಟ್ಟರ ವಿದ್ಯಾರ್ಥಿಗಳಿಗೆ ಹೇಳಿದರು.
ಸ್ಥಳೀಯ ಬಸವೇಶ್ವರ ಆವರಣದಲ್ಲಿ ಶುಕ್ರವಾರ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ಸ್ವಾರ್ವಜನಿಕ ಶಿಕ್ಷಣ ಇಲಾಖೆ, ನಂದೀಶ ಆಮ್‌ ಕಾಡ್‌ ಸಂಸ್ಥೆ ರಾಣೇಬೆನ್ನೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಧ್ಯಯನ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಲಹೇ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರಿಕ್ಷೇಯನ್ನು ಹೇಗೆ ಬರೆದರೆ ಹೆಚ್ಚು ಅಂಕ ಬರುತ್ತದೆ ಎನ್ನುದಕ್ಕೆ ವಿದ್ಯಾರ್ಥಿಗಳು ತಮ್ಮ ಮಾನಸಿಕ, ಸಾಮಜಿಕ, ಕೌಟುಂಬಿಕ ಸಮಸ್ಯೆಗಳಿಂದ ಹೊರಗೆ ಬರಬೇಕು ಅಂದಾಗ ಮಾತ್ರ ಓದಿದ ವಿಷಯ ತಲೆಗೆ ಹೋಗುತ್ತದೆ.
ಶಿಕ್ಷಣಾಧಿಕಾರಿ ಆರ್‌ ಟಿ. ಬಳಿಗಾರ, ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಬಿ ಎಮ್‌. ಅಗಸಿಬಾಗಿಲ ಸೇರಿದಂತೆ ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯೊಪಾಧ್ಯಾಯ ಜಿ ಎಮ್‌. ಹುಲ್ಲೂರ ಸ್ವಾಗತಿಸಿ, ನಿರೂಪಿಸಿದರು ಶಿಕ್ಷಣ ಸಂಯೋಜಕ ವೈ ವಿ. ಮಳಲಿ ವಂದಿಸಿದರು.

loading...