ಸತೀಶ ಜಾರಕಿಹೊಳಿ ಎಸಿ, ಎಸ್ಟಿ‌ ಜನರಲ್ಲಿ ಬೆಂಕಿ ಹಚ್ಚುವ ಪ್ರಯತ್ನ‌‌ ಮಾಡುತ್ತಿದ್ದಾರೆ: ಮುನವಳ್ಳಿ ಆರೋಪ

0
18
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:4 ಸತೀಶ ಜಾರಕಿಹೊಳಿ ಅವರಿಗೆ ಅಂಬೇಡ್ಕರ್ ಮಹಾಪರಿನಿರ್ವಾಣ ಸ್ಮಶಾನದಲ್ಲಿ ಮಾಡಲು ಪಕ್ಷದ‌ ಮುಖಂಡರು ಬಿಡಬಾರದು. ಇಲ್ಲದಿದ್ದಲ್ಲಿ ಗುಜರಾತ ಚುನಾವಣೆಯಲ್ಲಿ ಜಾಹಿರಾತು ಮುಖಾಂತರ ಕಾಂಗ್ರೆಸ್ ಪಕ್ಷದ‌ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು.
ಅವರು ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 61ನೇ ಮಹಾಪರಿನಿರ್ವಾಣ ದಿನದಂದು ಪರಿಶಿಷ್ಟ ಪಂಗಡದವರಿಗೆ ಅಂಬೇಡ್ಕರ ಅವರ ಅಭಿಮಾನಿಗಳಿಗೆ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಬೆಂಕಿ‌ಹಚ್ಚಿವ ಪ್ರಯತ್ನ ಮಾಡಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಾಲ್ಮೀಕಿ ಮಹರ್ಶಿ ಅವರ ಭಾವ ಚಿತ್ರ ಸ್ಮಶಾನದಲ್ಲಿಟ್ಟು ಪೂಜೆ‌‌ ಮಾಡುತ್ತಿರುವುದು ಅವರ ಸಮುದಾಯದವರೇ ಒಪ್ಪುತ್ತಿಲ್ಲ. ಬಾಬಾ ಸಾಹೇಬ ಅವರು ನಮಗೆ ದೇವರು ಅವರನ್ನು ಪೂಜೆ ಮಾಡುತ್ತಿರುವುದು ಸರಿಯಲ್ಲ.‌ಸ್ಮಶಾನದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರವಿಟ್ಟು ಸಿಹಿ ಊಟ‌ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ‌ ಸೇರಿದಂತೆ ಸಾಕಷ್ಟು ನಾಯಕರಿದ್ದಾರೆ. ಅವರು ಮಾಡುತ್ತಾರೆ‌. ಸತೀಶ ಜಾರಕಿಹೊಳಿ ನಮ್ಮ‌ ಸಮುದಾಯದವರೇ ಅಲ್ಲ. ಉದ್ಧಟತನವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಕೂಡಲೇ ಎಚ್ಚೆತ್ತುಕೊಂಡು ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಸ್ಮಶಾನದಲ್ಲಿ ಮಾಡಲು ಬಿಡಬಾರದು. ಬೇರೆ ಕಡೆ ಮಾಡುವಂತೆ ಸೂಚನೆ ನೀಡಬೇಕೆಂದರು.
ಸ್ಮಶಾನದಲ್ಲಿ ಮಹಾಪರಿನಿರ್ವಾಣ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ ಅವಹೇಳನಕಾರಿಯಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಇಂಥ ದಬ್ಬಾಳೆಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ. ಹರಿಪ್ರಸಾದ ಸ್ಮಶಾನದ ಕಾರ್ಯಕ್ರಮಕ್ಕೆ ಆಗಮಿಸುವುದನ್ನು ನಿರಾಕರಿಸಿದರು. ಮಠಾಧೀಶರು ಮೂಢನಂಬಿಕೆ ಹೋಗಲಾಡಿಸಲು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಜನಜಾಗೃತಿ ಮಾಡಿ ದುಡಿಯಲಿ. ಬೈಲೂರು ಸ್ವಾಮೀಜಿಗೆ ಬೇರೆ ಕೆಲಸವಿಲ್ಲವೇ. ದಲಿತ ವರ್ಗಗಳ ವಿರೋಧದ ನೆಉವೆ ಸದಾಶಿವ ನಗರ ಸ್ಮಶಾನದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಆತುರವೇಕೆ. ಸಿನಿಮಾ ನಟ ಆಗಮಿಸುವುದೇಕೆ. ಐಷಾರಾಮಿ ಬಸ್ಸಿನಲ್ಲಿ ಮಲಗಿ, ಸತ್ತವರ ದುಖಃದಲ್ಲಿರುವಾಗ ಅವರ ಎದುರು ಡಾ. ಅಂಬೇಡ್ಕರ್ ಭಾವಚಿತ್ರ ಇಟ್ಟು ಸಿಹಿ ಊಟ ಮಾಡುವ ಅಮಾನವೀಯ ಪದ್ಧತಿ ನಡೆದಿದೆ ಎಂದರು. ಬೇಕಿದ್ದರೆ ಸ್ಮಶಾನದ ಹೊರಗೆ ಮೌಢ್ಯವಿರೋಧಿ ಸಂಕಲ್ಪ ಮಾಡಿಕೊಳ್ಳಲಿ ಎಂದು ಶಂಕರ ಮುನವಳ್ಳಿ ಸಲಹೆ ನೀಡಿದರು.
ಫೇಸಬುಕ್ ನಲ್ಲಿ ನನ್ನ ವಿರುದ್ಧ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು ಅವಹೇಳನಕಾರಿ ಪದ ಬಳಸಿ ಬೆದರಿಕೆ ಹಾಕಿರುವುದು ಅವರ ಮನೋಸ್ಥಿತಿ ತೋರ್ಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫೇಸಬುಕ್ ಅವಹೇಳನ ಕಮೆಂಟಗಳ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಗುವುದು ಎಂದರು.

loading...