ಸತೀಶ ಜಾರಕಿಹೋಳಿ ಪ್ರಭಾವಿ ರಾಜಕಾರಣಿ: ಸಿದ್ದರಾಮಯ್ಯರಿಂದ ಪ್ರಶಂಸೆ

0
37
loading...

ಸತೀಶ ಜಾರಕಿಹೋಳಿ ಪ್ರಭಾವಿ ರಾಜಕಾರಣಿ: ಸಿದ್ದರಾಮಯ್ಯರಿಂದ ಪ್ರಶಂಸೆ

ಕನ್ನಡಮ್ಮ ಸುದ್ದಿ

ಯಮಕನಮರಡಿ 22:ಶಾಸಕರು ಎಐಸಿಸಿ ಕಾರ್ಯದರ್ಶಿಗಳು ಆದ ಸತೀಶ ಜಾರಕಿಹೋಳಿ ಅವರು ಒಬ್ಬ ಪ್ರಭಾವಿ ರಾಜಕಾರಣಿ ಅವರ ಶಕ್ತಿ ಏನು ಎಂಬುವುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಸತೀಶ ಜಾರಕಿಹೋಳಿ ಅವರನ್ನ ಅವರ ಕಾರ್ಯಗಳನ್ನ ಪ್ರಶಂಸಿಸಿದರು .

ಇಂದು ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಸಿಇಎಸ್ ಶಾಲಾ ಮೈದಾನದಲ್ಲಿ ನಡೆದ ರಾಜ್ಯ ಸರಕಾರದ ಸಾಧನಾ ಸಮಾವೇಶ ಮತ್ತು ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸತೀಶ ಜಾರಕಿಹೋಳಿ ಹಲವಾರು ಬಡವರ,ದಲಿತ ಪರ ಸಮಾಜ ಸವಲತ್ತುಗಳಿಂದ ವಂಚಿತರಾದವರಿಗೆ ಸೌಲಭ್ಯಗಳು ದೋರಕಿಸುವ ಎಲ್ಲ ವರ್ಗದ ಬಡವರ ಶೇಯೋಬಿವೃದ್ದಿಗೆ ಶಾಸಕ ಸತೀಶ ಜಾರಕಿಹೋಳಿ ಶ್ರಮಿಸುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ ಎಂದು ಶಾಸಕ ಸತೀಶ ಜಾರಕಿಹೋಳಿ ಅವರನ್ನ ಹೊಗಳಿದರು .
ಅವರು ಮುಂದೆ ಮಾತನಾಡುತ್ತ ನಮ್ಮ ಸರಕಾರ ಜನಪರ ಸರಕಾರ ನುಡುದಂತೆ ನಡೆದಿದ್ದೆವೆ ನಮ್ಮ ಸರಕಾರದ ಅವಧಿಯಲ್ಲಿ ಎಲ್ಲ ವರ್ಗದ ಜನರ ಹಿತಕಾಯುವ ಕೆಲಸವನ ಮಾಡಲಾಗಿದೆ .

ಯು.ಪಿ ಸಿಎಂ ವಿರುದ್ಧ ಹರಿಹಾಯ್ದ ಸಿಎಂ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯಾನಾಥ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ ಬಿಜೆಪಿ ಅವರಿಗೆ ಕರ್ನಾಟಕ ಇತಿಹಾಸ ಗೊತ್ತಿಲ್ಲ .ಅವರಿಗೆ ಇತಿಹಾಸ ತಿರುಚುವೊಂದೆ ಗೊತ್ತು.ನಾವು ಎಲ್ಲ ಮಹಾ ಪುರುಷರ ಜಯಂತಿಯನ್ನ ಆಚರಿಸುತ್ತಿವೆ ಯೋಗಿ ಆಧಿತ್ಯನಾಥ ಅವರು ನಾವು ಬರಿ ಟಿಪ್ಪು ಜಯಂತಿ ಅಷ್ಟೇ ಆಚರಣೆ ಮಾಡಲ್ಲ ಅಂಬೇಡ್ಕರ್, ಬಸವೇಶ್ವರ, ವಾಲ್ಮೀಕಿ, ಭಗೀರಥ ,ಕನಕದಾಸ ಸೇರಿದಂತೆ 26 ಜಯಂತಿಯನ್ನ ಕರ್ನಾಟಕದಲ್ಲಿ ಆಚರಿಸುತ್ತೆವೆ ಬಿಜೆಪಿ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಯೋಗಿ ಆಧಿತ್ಯನಾಥ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ ಅಂಶಗಳನ್ನ ಬಹುತೇಕ ಎಲ್ಲ ಭರವಸೆಯನ್ನು ಈಡೇರಿಸಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಸಾಧನೆಯನ್ನ ವಿವರಿಸಿದರು .

ಈ ಸಾಧನಾ ಸಮಾವೇಶದ ಅಧ್ಯಕ್ಷತೆಯನ್ನ ಶಾಸಕ ಸತೀಶ ಜಾರಕಿಹೋಳಿ ವಹಿಸಿದ್ದರು.ಮುಖ್ಯ ಅಥಿತಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೋಳಿ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ,ಶಾಸಕರಾದ ಫಿರೋಜ್ ಸೇಠ,ಜಿಲ್ಲಾಧಿಕಾರಿ ಜಿಯಾವುಲ್ಲಾ ,ಜಿ.ಪಂ.ಅಧ್ಯಕ್ಷೆಯಾದ ಆಶಾ ಐಹೋಳಿ,ಹುಕ್ಕೇರಿ ತಾ.ಪ.ಅಧ್ಯಕ್ಷರಾದ ದಸ್ತಗೀರ ಬಸ್ಸಾಪುರಿ,ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ,ಮಾಜಿ ಸಚಿವರಾದ ಎ.ಬಿ.ಪಾಟೀಲ, ಮುಖಂಡರಾದ ಕಿರಣಸಿಂಗ್ ರಜಪೂತ ,ರವಿ ಜಿಂಡ್ರಾಳಿ, ಮಹದೇವ ಪಟ್ಟೋಳಿ,ವೀರಣ್ಣ ಬಿಸಿರೋಟ್ಟಿ, ಸಾವಿರಾರು ಜನರು ಉಪಸ್ಥಿತರಿದ್ದರು.

loading...